ನೀವೇಕೆ ಸುಳ್ಳನ್ನು ಹರಡುತ್ತಿದ್ದೀರಿ: ಅಮಿತ್ ಶಾಗೆ ಚಂದ್ರಬಾಬು ನಾಯ್ಡು ತಿರುಗೇಟು

Update: 2018-03-24 10:59 GMT

ಹೊಸದಿಲ್ಲಿ, ಮಾ.24: ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರ ಪತ್ರ ಸಂಪೂರ್ಣವಾಗಿ ಸುಳ್ಳು ಮಾಹಿತಿಗಳನ್ನು ಒಳಗೊಂಡಿದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಎನ್ ಡಿಎ ಮೈತ್ರಿ ಕೂಟವನ್ನು ತೊರೆದ ಟಿಡಿಪಿ ನಿರ್ಧಾರವು ದುರದೃಷ್ಟಕರ ಹಾಗು ರಾಜಕೀಯ ಉದ್ದೇಶದಿಂದ ಕೂಡಿದೆ. ಇದರ ಹೊರತಾಗಿ ಆಂಧ್ರ ಪ್ರದೇಶದ ಅಭಿವೃದ್ಧಿಯ ಬಗೆಗಿನ ಕಾಳಜಿಯಿಂದಲ್ಲ ಎಂಬ ಅಮಿತ್ ಶಾ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ನಾಯ್ಡು. “ಅಮಿತ್ ಶಾರ ಪತ್ರವು ಸಂಪೂರ್ಣವಾಗಿ ಸುಳ್ಳು ಮಾಹಿತಿಗಳನ್ನು ಒಳಗೊಂಡಿದೆ. ಅದು ಅವರ ನಿಲುವನ್ನು ತೋರಿಸುತ್ತದೆ. ಈಶಾನ್ಯ ರಾಜ್ಯಗಳಿಗೆ ಕೇಂದ್ರವು ಈಗಲೂ ವಿಶೇಷ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಆಂಧ್ರ ಪ್ರದೇಶಕ್ಕೂ ಇದೇ ರೀತಿಯ ನೆರವು ನೀಡಿದ್ದರೆ ರಾಜ್ಯದಲ್ಲಿ ಹಲವು ಕೈಗಾರಿಕೆಗಳು ಇರುತ್ತಿತ್ತು” ಎಂದಿದ್ದಾರೆ

“ಹಲವು ಹಣಕಾಸಿನ ನೆರವು ನೀಡಿದ್ದರೂ ನಾವು ಅದನ್ನು ಸರಿಯಾಗಿ ಬಳಸಿಲ್ಲ ಎಂದು ಅಮಿತ್ ಶಾ ಪತ್ರದಲ್ಲಿ ಹೇಳಿದ್ದಾರೆ. ಆಂಧ್ರ ಪ್ರದೇಶ ಸರಕಾರವು ಅಸಮರ್ಥ ಎಂದು ಹೇಳಲು ಅವರು ಬಯಸಿದ್ದಾರೆ. ನಮ್ಮ ಸರಕಾರದ ಜಿಡಿಪಿ ಉತ್ತಮವಾಗಿದೆ. ಹಲವು ರಾಷ್ಟ್ರಪ್ರಶಸ್ತಿಗಳನ್ನು ಗೆದ್ದಿದೆ. ಇದು ನಮ್ಮ ಸಾಮರ್ಥ್ಯ. ನೀವೇಕೆ ಸುಳ್ಳನ್ನು ಹರಡುತ್ತಿದ್ದೀರಿ” ಎಂದು ಚಂದ್ರಬಾಬು ನಾಯ್ಡು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News