ಆಧಾರ್ ಬಯೋಮೆಟ್ರಿಕ್ ವಿವರ ಸೋರಿಕೆ ಸಾಧ್ಯವಿಲ್ಲ: ಕೇಂದ್ರ ಸಚಿವ ಅಲ್ಫೋನ್ಸ್

Update: 2018-03-24 11:22 GMT

ಕೊಚ್ಚಿ,ಮಾ.24: ಆಧಾರ್ ವಿವರಗಳು ಸೋರಿಕೆಯಾಗುತ್ತಿವೆ ಎನ್ನುವ ವರದಿಗಳು ಸುಳ್ಳು ಎಂದು ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂದಾನಂ ಹೇಳಿದ್ದಾರೆ. ಬಯೊಮೆಟ್ರಿಕ್ ವಿವರಗಳನ್ನು ಹಾಗೆಲ್ಲ  ಸೋರಿಕೆ ಮಾಡಲು ಸಾಧ್ಯವಿಲ್ಲ ಎಂದು  ಹ್ಯಾಶ್ ಫ್ಯೂಚರ್ ಡಿಜಿಟಲ್ ಶೃಂಗದ ಸಮಾರೋಪ ಸಮ್ಮೇಳನದಲ್ಲಿ ಮುಖ್ಯಭಾಷಣ ಮಾಡುತ್ತಾ  ಅವರು ಹೇಳಿದರು.

ಆಧಾರ್ ವಿವರಗಳೆಂದು ಈಗ ಕೇವಲ ಹೆಸರು ಮತ್ತು ವಿಳಾಸಗಳು ಹೊರಬರುತ್ತಿದೆ. ಆಧಾರ್‍ನಲ್ಲಿ ಇತರ ವಿಷಯಗಳಿಗೆ ಬಳಸುವ ಇಮೇಲ್ ವಿಳಾಸವನ್ನು ಸೇರ್ಪಡೆ ಮಾಡುವುದಿಲ್ಲ. ಬೆರಳಚ್ಚು, ಕಣ್ಣಿನ ಗುರುತುಗಳ ಸಹಿತ ಬಯೋಮೆಟ್ರಿಕ್ ವಿವರಗಳು ಸೋರಿಕೆಯಾದ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ. ಹೀಗಿರುವಾಗ ಮತ್ತೇಕೆ ಇಂತಹ ಸುದ್ದಿಗಳು ಹರಡಲಾಗುತ್ತಿದೆ ಎಂದು ಅರ್ಥವಾಗುವುದಿಲ್ಲ.  ಸ್ವಂತ ದೇಶದ ಸರಕಾರ ಹೆಸರು ವಿಳಾಸ ಕೇಳುವಾಗ ಮಾತ್ರ ಖಾಸಗಿ ಹಕ್ಕಿನ ಉಲ್ಲಂಘನೆ ಎನ್ನುವ ಆಕ್ಷೇಪ ಕೇಳಿ ಬರುತ್ತದೆ ಮತ್ತು  ಇದಕ್ಕಾಗಿ ಹೋರಾಟ ಆಗುತ್ತಿದೆ ಎಂದು ಸಚಿವರು ಹೇಳಿದರು. ಇದೇ ವೇಳೆ ಐಟಿ ಸಮೂಹಕ್ಕೆ    ದೇಶದ ಡಿಜಿಟಲ್ ಭವಿಷ್ಯಕ್ಕಾಗಿ ಯಾವ ರೀತಿಯ ಕೊಡುಗೆ ನೀಡಲು ಸಾಧ್ಯವೆನ್ನುವ ಚಿಂತನೆ ನಡೆಸಬೇಕಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News