ಕೇರಳ: ಐಸಿಸ್ ಕಾರ್ಯಕರ್ತೆ ಯಾಸ್ಮೀನ್ ಝಾಹಿದ್‌ಗೆ 7 ವರ್ಷ ಜೈಲು

Update: 2018-03-24 13:51 GMT

ಕೊಚ್ಚಿ, ಮಾ. 24: ಕೇರಳದ ಐಸಿಸ್ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿ ಕೊಚ್ಚಿಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ವಿಶೇಷ ನ್ಯಾಯಾಲಯ ಐಸಿಸ್‌ಗೆ ನೇಮಕ ಮಾಡುತ್ತಿದ್ದ ಯಾಸ್ಮೀನ್ ಮುಹಮ್ಮದ್ ಝಾಹಿದ್‌ಗೆ 7 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

  ಅಕ್ರಮ ಚಟುವಟಿಕೆ ತಡೆ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂ ಅಡಿಯಲ್ಲಿ ಆಕೆಯನ್ನು ದೋಷಿ ಎಂದು ಪರಿಗಣಿಸಿದ ಬಳಿಕ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಸಂತೋಷ್ ಕುಮಾರ್ ಅವರು ಯಾಸ್ಮಿನ್ ಮುಹಮ್ಮದ್ ಝಾಹಿದ್‌ಗೆ ಶಿಕ್ಷೆ ವಿಧಿಸಿದರು.

 ಎರ್ನಾಕುಳಂನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯ ಕೂಡ ಯಾಸ್ಮಿನ್ 25 ಸಾವಿರ ರೂ. ದಂಡ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News