ಕರ್ನಾಟಕ ಜೀವ ವೈವಿಧ್ಯ ಮಂಡಳಿ ರಾಷ್ಟ್ರದಲ್ಲಿಯೇ ನಂಬರ್ 1: ಎಸ್.ಪಿ. ಶೇಷಾದ್ರಿ

Update: 2018-03-24 16:40 GMT

ಬೆಂಗಳೂರು, ಮಾ. 24: ಕರ್ನಾಟಕ ಜೀವವೈವಿಧ್ಯ ಮಂಡಳಿಯು ರಾಷ್ಟ್ರದಲ್ಲಿಯೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಂಡಳಿಯ ಅಧ್ಯಕ್ಷ ಎಸ್.ಪಿ. ಶೇಷಾದ್ರಿ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಅರಣ್ಯ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಜೀವವೈವಿಧ್ಯತೆ ಮತ್ತು ಜೈವಿಕ ಸಂಪನ್ಮೂಲಗಳ ಸದ್ಭಳಕೆ ಕುರಿತು ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಮಂಡಳಿಯು ಆಯೋಜಿಸಿದೆ ಎಂದರು.

ಜೀವವೈವಿಧ್ಯತೆ ಅಧಿನಿಯಮ-2002, ಜೈವಿಕ ಸಂಪನ್ಮೂಲಗಳ ಬಳಕೆ ಮತ್ತು ಲಾಭಾಂಶದ ಹಂಚಿಕೆಯ ನಿಯಮಗಳು 2014 ಕುರಿತಂತೆ ತಜ್ಞರಿಂದ ಮಾಧ್ಯಮ ಪ್ರತಿನಿಧಿಗಳಿಗಾಗಿ ಉಪನ್ಯಾಸ ಏರ್ಪಡಿಸಲಾಗಿತ್ತು. ಜೈವಿಕ ಸಂಪನ್ಮೂಲಗಳನ್ನು ಬಳಸುವ ಉದ್ದಿಮೆದಾರರು, ಔಷಧ ಕಂಪೆನಿಗಳು ಕಾಯ್ದೆ ಹಾಗೂ ನಿಯಮಗಳಲ್ಲಿ ಗೊತ್ತುಪಡಿಸಿರುವಂತೆ ನಿರ್ದಿಷ್ಟ ಲಾಭಾಂಶವನ್ನು ಕರ್ನಾಟಕ ಜೀವವೈವಿಧ್ಯ ಮಂಡಳಿಗೆ ಸಲ್ಲಿಸಲು ಮುಂದಾಗಬೇಕೆಂದು ಮಂಡಳಿಯ ಸದಸ್ಯ ಕಾರ್ಯದರ್ಶಿ ವೀರೇಂದ್ರಸಿಂಗ್ ಕರೆಕೊಟ್ಟರು.

ಇದೇ ವೇಳೆ ಮಂಡಳಿಯ ಮರು ವಿನ್ಯಾಸಗೊಂಡ ಅಂತರ್ಜಾಲ ತಾಣ http://www.Karnataka.gov.in/kbb ಅನ್ನು ಲೋಕಾರ್ಪಣೆ ಮಾಡಲಾಯಿತು. ಮಂಡಳಿಯ ಸದಸ್ಯರಾದ ಪ್ರೊ.ಎಂ.ನಾರಾಯಣಸ್ವಾಮಿ, ಪ್ರೊ. ನಿರಂಜನಮೂರ್ತಿ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News