ಬೆಂಗಳೂರು: ನಾಲ್ವರು ಕಳ್ಳರ ಬಂಧನ; 13 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

Update: 2018-03-24 19:05 GMT

 ಬೆಂಗಳೂರು, ಮಾ.24: ರಾತ್ರಿ ವೇಳೆ ಮನೆಗಳವು ಮಾಡುತ್ತಿದ್ದ ಇಬ್ಬರು ಕಳ್ಳರು ಹಾಗೂ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಲ್ಲಿ ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಆರೋಪಿಗಳು ಸೇರಿದಂತೆ ನಾಲ್ವರನ್ನು ಬಂಧಿಸುವಲ್ಲಿ ಸಿದ್ದಾಪುರದ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಲಕ್ಷ್ಮಿಲೇಔಟ್‌ನ ಸನ್ಮಾನ್ ಖಾನ್(22), ಸೋಮೇಶ್ವರ ನಗರದ ಮೊಹಮ್ಮುದ್ ಜಬೀಲ್‌ವುಲ್(23) ಎಂಬ ಕಳ್ಳರನ್ನು ಬಂಧಿಸಿ, 10ಲಕ್ಷ ವೌಲ್ಯದ 240ಗ್ರಾಂ ಚಿನ್ನಾಭರಣ, 5 ಕ್ಯಾಮೆರಾ, 2ಲ್ಯಾಪ್‌ಟಾಪ್, 2ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಸಲ್ಮಾನ್ ಖಾನ್ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ಕೆಲಸಕ್ಕೆ ಹೋದ ಮನೆಗಳಲ್ಲಿ ಚಿನ್ನಾಭರಣಗಳನ್ನು ಇಡುವ ಜಾಗಗಳನ್ನು ನೋಡಿಕೊಂಡು ಮನೆ ಮಾಲಕರು ಪ್ರವಾಸಕ್ಕೆ ಹೋಗಿರುವುದನ್ನು ಖಾತ್ರಿಪಡಿಸಿಕೊಂಡು ಮತ್ತೊಬ್ಬ ಆರೋಪಿ ಜಬೀವುಲ್ ಜೊತೆ ಸೇರಿ ಮನೆಕಳವು ಮಾಡುತ್ತಿದ್ದರು.

ಬಸ್‌ನಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಬನ್ನೇರುಘಟ್ಟ ರಸ್ತೆ ಕುಮರೇಶನ್(35), ಕೋರಮಂಗಲದ ಮಣಿ(29)ನನ್ನು ಬಂಧಿಸಿ 3ಲಕ್ಷ ವೌಲ್ಯದ 115ಗ್ರಾಂ ಚಿನ್ನಾಭರಣಗಳನ್ನು ವಶಪಡಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News