18 ವರ್ಷಗಳ ಹಿಂದಿನ ಸ್ಫೋಟದಲ್ಲಿ ಕಾಲುಗಳನ್ನು ಕಳೆದುಕೊಂಡಾಕೆ ಈಗ ವೈದ್ಯೆ

Update: 2018-03-26 05:22 GMT

ಕಣ್ಣೂರು, ಮಾ.26: ಕೇರಳದ ಕಣ್ಣೂರಿನಲ್ಲಿ 18 ವರ್ಷಗಳ ಹಿಂದೆ ನಡೆದ ರಾಜಕೀಯ ಹಿಂಸಾಚಾರದ ಸಂದರ್ಭದಲ್ಲಿ ನಡೆದ ಸ್ಫೋಟದಲ್ಲಿ ಆಕೆ ತನ್ನ ಕಾಲನ್ನೇ ಕಳೆದುಕೊಂಡಿದ್ದರು. ಆದರೆ ಈ ಘಟನೆಗೆ ಮಾತ್ರ ಕೆ. ಆಸ್ನಾರ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಸಾಧ್ಯವಾಗಲಿಲ್ಲ. ಕಳೆದ ವಾರ ಆಕೆ ವೈದ್ಯಕೀಯ ಕಾಲೇಜಿನಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಕಚ್ಚಾ ಬಾಂಬ್ ಸ್ಫೊಟದಲ್ಲಿ ತನ್ನ ಕಾಲನ್ನು ಕಳೆದುಕೊಂಡು ಇದೀಗ ವೈದ್ಯೆಯಾಗಿರುವ 24ರ ಹರೆಯದ ಅಸ್ನಾ ಕೊಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ತನ್ನ ವೈದ್ಯಗಿರಿಯನ್ನು ಆರಂಭಿಸುತ್ತಿದ್ದಾರೆ. ಆದರೆ ಕಣ್ಣೂರು ಗಟನೆ ಮಾತ್ರ ಈಗಲೂ ಆಕೆಯ ಸ್ಮತಿಪಟಲದಿಂದ ಮಾಸಿಲ್ಲ.

ನನ್ನ ಕನಸು ಸಾಕಾರವಾಗಿದೆ. ಆ ನೋವು ನನ್ನನ್ನು ಮತ್ತಷ್ಟು ಗಟ್ಟಿಗೊಳಿಸಿತು. ಆದರೆ ದುರದೃಷ್ಟಕರವೆಂದರೆ ನನ್ನ ಜಿಲ್ಲೆಯಲ್ಲಿ ಈಗಲೂ ರಕ್ತಪಾತ ನಡೆಯುತ್ತಲೇ ಇದೆ ಎಂದು ಆಸ್ನಾ ರವಿವಾರ ತಿಳಿಸಿದ್ದಾರೆ.

ಇತ್ತೀಚೆಗೆ ಆಸ್ನಾ, ಸಿಪಿಐ ಕಾರ್ಯಕರ್ತರಿಂದ ಹತ್ಯೆಗೀಡಾದ ಯುವ ಕಾಂಗ್ರೆಸ್‌ನ ಶುಐಬ್ ಮನೆಗೆ ತೆರಳಿ ತಾಯಿ ಮತ್ತು ಸಹೋದರಿಗೆ ಸಾಂತ್ವಾನ ನೀಡಿದರು. ಕಳೆದ 2 ವರ್ಷಗಳಲ್ಲಿ ನಡೆದ ಸುಮಾರು 200 ಘರ್ಷಣೆಗಳಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಈ ಹಿಂಸಾಚಾರಗಳು ಹೆಚ್ಚಾಗಿ ಎಡರಂಗ ಮತ್ತು ಆರ್‌ಎಸ್‌ಎಸ್ ಬೆಂಬಲಿಗರ ಮಧ್ಯೆ ನಡೆಯುತ್ತದೆ. 2000ನೇ ಇಸವಿಯಲ್ಲಿ ಆಸ್ನಾ ಪೂವತ್ತೂರ್ ಗ್ರಾಮದಲ್ಲಿರುವ ತನ್ನ ಮನೆಯ ಮುಂದೆ ತನ್ನ ಸಹೋದರ ಆನಂದ್ ಜೊತೆ ಆಟವಾಡುತ್ತಿದ್ದಾಗ ಆರ್‌ಎಸ್‌ಎಸ್ ಬೆಂಬಲಿಗರು ಕಚ್ಚಾ ಬಾಂಬೊದನ್ನು ಆಕೆಯ ಮನೆಯ ಮೇಲೆ ಎಸೆದಿದ್ದರು. ಈ ಸ್ಫೋಟದಲ್ಲಿ ಆಸ್ನಾ ತನ್ನ ಬಲಗಾಲನ್ನು ಕಳೆದುಕೊಂಡಿದ್ದರು.

ಆಸ್ನಾ ಕೊಯಿಕ್ಕೋಡ್‌ನಲ್ಲಿ ಎಂಬಿಬಿಎಸ್ ಕಲಿಯುತ್ತಿದ್ದಾಗ ಆಕೆ ಮೂರನೇ ಮಹಡಿ ಏರಲು ಸಾಧ್ಯವಿಲ್ಲದ್ದನ್ನು ಅರಿತ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಈ ವಿಷಯವನ್ನು ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿಗೆ ತಿಳಿಸಿದ್ದರು. ಕೂಡಲೇ ಚಾಂಡಿ, ಆ ಕಟ್ಟಡಕ್ಕೆ ಲಿಫ್ಟ್ ಮಂಜೂರು ಮಾಡಿದ್ದರು.

2008ರಲ್ಲಿ ಆಸ್ನಾ ಮನೆಗೆ ಬಾಂಬ್ ಎಸೆದ ಪ್ರಕರಣದಲ್ಲಿ 13 ಆರೆಸ್ಸೆಸ್ ಕಾರ್ಯಕರ್ತರಿಗೆ ಶಿಕ್ಷೆಯಾಯಿತು. ಇಂಥ ಬುದ್ಧಿಹೀನ ಹಿಂಸಾಚಾರವನ್ನು ತಡೆಯಲು ತಾನು ಯಾವ ರೀತಿಯ ಅಭಿಯಾನದಲ್ಲಿ ಫಾಲ್ಗೊಳ್ಳಲೂ ಸಿದ್ಧವಿದ್ದೇನೆ ಎಂದು ಹೇಳುವ ಆಸ್ನಾ, ಜನರು ರಾಜಕೀಯ ಪ್ರೇರಿತ ಹಿಂಸಾಚಾರ ಹಾಗೂ ಇತರ ಹಿಂಸಾಚಾರದಿಂದ ದೂರವುಳಿಯಬೇಕು ಎಂದು ಮನವಿ ಮಾಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News