ಕೋಮು ಗಲಭೆಗೆ ಪ್ರಚೋದನೆ: ಕೇಂದ್ರ ಸಚಿವ ಚೌಬೆ ಪುತ್ರನಿಗೆ ಅರೆಸ್ಟ್ ವಾರೆಂಟ್

Update: 2018-03-26 06:30 GMT

ಪಾಟ್ನಾ, ಮಾ.26: ಬಿಹಾರದ ಭಾಗಲ್ಪುರ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರ ಪುತ್ರ ಅರ್ಜಿತ್ ಶಾಶ್ವತ್ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ.

"ಕೋಮು ಸ್ವರೂಪದ ಪ್ರಕರಣಗಳಲ್ಲಿ ನಾವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಒಂದು ಪ್ರಕರಣದಲ್ಲಿ ಬಂಧನದ ವಾರಂಟ್ ಪಡೆದಿದ್ದೇವೆ. ಮತ್ತೊಂದು ಪ್ರಕರಣದಲ್ಲೂ ಅದನ್ನು ಎದುರು ನೋಡುತ್ತಿದ್ದೇವೆ" ಎಂದು ಎಡಿಜಿಪಿ ಎಸ್.ಕೆ.ಸಿಂಗ್ ಸ್ಪಷ್ಟಪಡಿಸಿದ್ದಾರೆ. ಸ್ಥಳೀಯ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ.

ಮಾರ್ಚ್ 17ರಂದು ಪೊಲೀಸರ ಅನುಮತಿ ಪಡೆಯದೇ ಮೆರವಣಿಗೆ ನಡೆಸಿದ್ದಕ್ಕಾಗಿ ಶಾಶ್ವತ್ ಹಾಗೂ ಇತರ ಎಂಟು ಮಂದಿ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಈ ಪ್ರತಿಭಟನಾ ಮೆರವಣಿಗೆ ಕೋಮುಸಂಘರ್ಷಕ್ಕೆ ಕಾರಣವಾಗಿತ್ತು. ಇಬ್ಬರು ಪೊಲೀಸರು ಸೇರಿದಂತೆ ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದರು.

ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆರ್‍ಜೆಡಿ ಹಾಗೂ ಕಾಂಗ್ರೆಸ್ ಸದಸ್ಯರು ಕಳೆದ ವಾರ ವಿಧಾನಸಭಾ ಕಲಾಪಕ್ಕೆ ಅಡ್ಡಿಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News