ಹೊತ್ತಿ ಉರಿದ ತೈಲ ಟ್ಯಾಂಕರನ್ನು ಪೆಟ್ರೋಲ್ ಬಂಕ್ ನಿಂದ ದೂರ ಸಾಗಿಸಿದ ಸಾಹಸಿ: ತಪ್ಪಿದ ಭಾರೀ ಅನಾಹುತ

Update: 2018-03-26 08:50 GMT

ಮಧ್ಯಪ್ರದೇಶ, ಮಾ.26: ಹೊತ್ತಿ ಉರಿಯುತ್ತಿದ್ದ ತೈಲ ಟ್ಯಾಂಕರನ್ನು ಪೆಟ್ರೋಲ್ ಬಂಕ್ ವೊಂದರಿಂದ ದೂರ ಸಾಗಿಸಿ ಹಲವು ಜನರ ಪ್ರಾಣ ಉಳಿಸಿದ ಚಾಲಕರೊಬ್ಬರ ಧೈರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ಮಧ್ಯಪ್ರದೇಶದ ನರಸಿಂಗ್ ಪುರದಲ್ಲಿ ಈ ಘಟನೆ ನಡೆದಿದ್ದು, ಸಾಜಿದ್ ಎಂಬವರೇ ಸಮಯಪ್ರಜ್ಞೆ ಮೆರೆದ ಚಾಲಕ. ಇದೇ ಬಂಕ್ ನಲ್ಲಿ ಹಲವು ವಾಹನಗಳ ತೈಲ ತುಂಬಿಸಿಕೊಳ್ಳು ಸಾಲುಗಟ್ಟಿ ನಿಂತಿತ್ತು.

ತೈಲ ಟ್ಯಾಂಕರೊಂದು ಹೊತ್ತಿ ಉರಿಯುತ್ತಿದ್ದುದನ್ನು ನಾನು ನೋಡಿದೆ. ಪೆಟ್ರೋಲ್ ಬಂಕ್ ನಿಂದ ಹೇಗಾದರೂ ಮಾಡಿ ಟ್ಯಾಂಕರನ್ನು ದೂರ ಸಾಗಿಸಬೇಕು ಎಂದು ನಾನು ಆಲೋಚಿಸಿದೆ. ತೈಲ ಸಂಗ್ರಹಣಾ ಪ್ರದೇಶಕ್ಕೆ ಬೆಂಕಿ ಹರಡಿದ್ದರೆ ಭಾರೀ ಅಪಾಯ ಎದುರಾಗುತ್ತಿತ್ತು ಎಂದು ಸಾಜಿದ್ ಹೇಳಿದ್ದಾರೆ.

ಸಾಜಿದ್ ಅವರ ಕೈಗಳಿಗೆ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೈಲ ಟ್ಯಾಂಕರ್ ಗೆ ಬೆಂಕಿ ತಗಲಿದ ಕಾರಣ ಇನ್ನೂ ಸ್ಪಷ್ಟಗೊಂಡಿಲ್ಲ. ದಾರಿಹೋಕರು ಸಾಜಿದ್ ಹೊತ್ತಿ ಉರಿಯುತ್ತಿದ್ದ ಟ್ಯಾಂಕರ್ ಚಲಾಯಿಸುತ್ತಿರುವುದನ್ನು ವಿಡಿಯೋ ಮಾಡಿದ್ದು, ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News