ಚೀನಾ ವಾಯುಪಡೆ ವಿಮಾನಗಳನ್ನು ಹಿಂಬಾಲಿಸಿದ ತೈವಾನ್ ವಿಮಾನಗಳು

Update: 2018-03-26 15:22 GMT

 ತೈಪೆ (ತೈವಾನ್), ಮಾ. 26: ತೈವಾನ್‌ನ ದಕ್ಷಿಣದಲ್ಲಿರುವ ಬಶಿ ಕಾಲುವೆಯುದ್ದಕ್ಕೆ ಚೀನಾ ವಾಯುಪಡೆಯ ವಿಮಾನಗಳು ಸೋಮವಾರ ಹಾರಾಟ ನಡೆಸಿದಾಗ, ತೈವಾನ್ ತನ್ನ ಯುದ್ಧ ವಿಮಾನಗಳನ್ನೂ ಸ್ಥಳಕ್ಕೆ ಕಳುಹಿಸಿದೆ ಎಂದು ತೈವಾನ್‌ನ ರಕ್ಷಣಾ ಸಚಿವಾಲಯ ಹೇಳಿದೆ.

ತೈಪೆ ಮತ್ತು ಚೀನಾಗಳ ನಡುವೆ ಇಂಥ ಸಂಘರ್ಷಗಳು ಆಗಾಗ ನಡೆಯುತ್ತಿವೆ.

ಚೀನಾವು ಪಶ್ಚಿಮ ಪೆಸಿಫಿಕ್ ಸಮುದ್ರಕ್ಕೆ ಈ ಕಾಲುವೆಯ ಮೇಲಿನಿಂದಾಗಿ ಅನಿರ್ದಿಷ್ಟ ಸಂಖ್ಯೆಯ ಕ್ಸಿಯಾನ್ ಎಚ್-6 ಬಾಂಬರ್ ವಿಮಾನಗಳು, ಸು-30 ಯುದ್ಧ ವಿಮಾನಗಳು ಮತ್ತು ವೈ-8 ಸಾರಿಗೆ ವಿಮಾನಗಳನ್ನು ಕಳುಹಿಸಿದೆ ಎಂದು ತೈವಾನ್ ಸಚಿವಾಲಯ ತಿಳಿಸಿದೆ.

ಚೀನಾದ ಯುದ್ಧವಿಮಾನಗಳು ತಮ್ಮ ನೆಲೆಗೆ ಮರಳುವವರೆಗೆ ತೈವಾನ್‌ನ ಯುದ್ಧವಿಮಾನಗಳು ಅವುಗಳನ್ನು ಹಿಂಬಾಲಿಸಿದವು ಎಂದು ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಚೀನಾದ ವಿಮಾನವಾಹಕ ನೌಕೆಯೊಂದು ಮಾರ್ಚ್ 21ರಂದು ಅಗಲ ಕಿರಿದಾದ ತೈವಾನ್ ಜಲಸಂಧಿಯ ಮೂಲಕ ಸಾಗಿದಾಗ ತೈವಾನ್ ತನ್ನ ನೌಕೆಗಳು ಮತ್ತು ವಿಮಾನಗಳನ್ನು ಕಳುಹಿಸಿದೆ.

ತೈವಾನ್ ತನಗೆ ಸೇರಿದ್ದು ಹಾಗೂ ಅದು ಚೀನಾದ ಸಿಡಿದುಹೋದ ಒಂದು ಪ್ರಾಂತ ಎಂಬುದಾಗಿ ಚೀನಾ ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News