ಇಲಿ ಕೊಲ್ಲಲು 3 ಲಕ್ಷ ವಿಷಮಿಶ್ರಿತ ಮಾತ್ರೆಗಳ ಬಳಕೆ: ಮಹಾರಾಷ್ಟ್ರ ಸರಕಾರ

Update: 2018-03-26 17:09 GMT

ಮುಂಬೈ, ಮಾ.26: ಮಹಾರಾಷ್ಟ್ರದಲ್ಲಿ ಮಿತಿಮೀರಿರುವ ಇಲಿಗಳ ಹಾವಳಿ ನಿಯಂತ್ರಿಸಲು 3 ಲಕ್ಷಕ್ಕೂ ಹೆಚ್ಚು ವಿಷಮಿಶ್ರಿತ ಮಾತ್ರೆಗಳನ್ನು ಸಚಿವಾಲಯದಲ್ಲಿ ಇಡಲಾಗಿದೆ ಎಂದು ಸರಕಾರ ತಿಳಿಸಿದೆ.

  ಕಳೆದ ವಾರ ಬಿಜೆಪಿ ಮುಖಂಡ, ಮಾಜಿ ಸಚಿವ ಏಕನಾಥ್ ಖಾಡ್ಸೆ ಸದನದಲ್ಲಿ ನಡೆದ ಚರ್ಚೆಯ ಸಂದರ್ಭ, 3,19,400 ಇಲಿಗಳನ್ನು ಒಂದು ವಾರದಲ್ಲಿ ಕೊಂದಿರುವುದಾಗಿ ವರದಿಯಾಗಿದೆ. ಇದು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಲೋಕೋಪಯೋಗಿ ಇಲಾಖೆಯ ಸಚಿವ ಚಂದ್ರಕಾಂತ್ ಪಾಟೀಲ್, 3,19,400 ಮಾತ್ರೆಗಳನ್ನು ಇಡಲಾಗಿದೆ. ಇದು ಸತ್ತಿರುವ ಇಲಿಗಳ ಸಂಖ್ಯೆಯಲ್ಲ ಎಂದು ಹೇಳಿದರು. ಈ ಮಾತ್ರೆಗಳನ್ನು ಸಚಿವಾಲಯದ ಕಟ್ಟಡದಲ್ಲಿ ಇಡುವ ಕಾರ್ಯದ ಗುತ್ತಿಗೆಯನ್ನು ವಿನಾಯಕ ಮಝೂರ್ ಸಹಕಾರಿ ಸಂಸ್ಥೆ ವಹಿಸಿಕೊಂಡಿದ್ದು ಎರಡು ತಿಂಗಳ ಅವಧಿ ನೀಡಲಾಗಿತ್ತು. ಆದರೆ 2016ರ ಮೇ 3ರಿಂದ 9ರವರೆಗಿನ ಒಂದು ವಾರಾವಧಿಯಲ್ಲಿ ಈ ಕಾರ್ಯ ಪೂರ್ಣಗೊಂಡಿದೆ ಎಂದು ಸಚಿವರು ತಿಳಿಸಿದರು.

ಸಚಿವಾಲಯದಲ್ಲಿ 3,19,400 ಇಲಿಗಳು ಕಂಡುಬಂದಿದ್ದು ಇವುಗಳನ್ನು ಹತ್ಯೆ ಮಾಡುವ ಬಗ್ಗೆ ಒಂದು ಕಾರ್ಯಾದೇಶವನ್ನು ಆಡಳಿತ ವಿಭಾಗ ಜಾರಿಗೊಳಿಸಿದ್ದು ಸಂಸ್ಥೆಯೊಂದಕ್ಕೆ ಆರು ತಿಂಗಳ ಕಾಲಾವಧಿ ನೀಡಲಾಗಿತ್ತು. ಆದರೆ ಕೇವಲ 7 ದಿನದಲ್ಲೇ ಎಲ್ಲಾ ಇಲಿಗಳನ್ನೂ ಕೊಲ್ಲಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿರುವುದಾಗಿ ಸಮೀಕ್ಷೆಯೊಂದರ ವರದಿಯಲ್ಲಿ ತಿಳಿಸಲಾಗಿದೆ . ಬಿಎಂಸಿಗೆ ಆರು ಲಕ್ಷ ಇಲಿ ಕೊಲ್ಲಲು ಎರಡು ವರ್ಷ ಬೇಕಾಗಿದೆ. ಆದರೆ ಈ ಸಂಸ್ಥೆ ಕೇವಲ 7 ದಿನದಲ್ಲಿ ಸುಮಾರು 4 ಲಕ್ಷ ಇಲಿ ಕೊಂದಿರುವುದು ಆಶ್ಚರ್ಯದ ವಿಷಯ ಎಂದು ಖಾಡ್ಸೆ ಹೇಳಿದ್ದರು.

ಈ ಹೇಳಿಕೆಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News