ಬಾಂಗ್ಲಾದಲ್ಲಿ ಕೈಗಾರಿಕಾ ಪ್ರಾಂಗಣ ನಿರ್ಮಿಸುತ್ತಿರುವ ಚೀನಾ

Update: 2018-04-05 17:47 GMT

ಢಾಕಾ, ಎ. 5: ಚೀನಾವು ಬಾಂಗ್ಲಾದೇಶದಲ್ಲಿ 750 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರಾಂಗಣವೊಂದನ್ನು ನಿರ್ಮಿಸುತ್ತಿದೆ ಹಾಗೂ ಅದರ ಹೆಚ್ಚಿನ ಭಾಗವನ್ನು ಚೀನಾದ ಕೈಗಾರಿಕಾ ಘಟಕಗಳು ಬಳಸಿಕೊಳ್ಳಲಿವೆ ಎಂದು ಚೀನಾದ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.

ಚೀನಾದ ಸರಕಾರಿ ಒಡೆತನದ ಚೀನಾ ಹಾರ್ಬರ್ ಇಂಜಿನಿಯರಿಂಗ್ ಕಂಪೆನಿಯು ಬಾಂಗ್ಲಾದೇಶ ವಿಶೇಷ ಆರ್ಥಿಕ ವಲಯ ಪ್ರಾಧಿಕಾರದ ಸಹಯೋಗದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ ಹಾಗೂ ಇದರಲ್ಲಿ 70 ಶೇಕಡ ಪಾಲನ್ನು ಚೀನಾ ಹೊಂದಲಿದೆ ಎಂದು ಢಾಕಾದಲ್ಲಿರುವ ಚೀನಾ ರಾಯಭಾರ ಕಚೇರಿಯಲ್ಲಿ ಆರ್ಥಿಕ ಮತ್ತು ವಾಣಿಜ್ಯ ಸಲಹಾಕಾರ ಲಿ ಗುವಾಂಗ್‌ಜುನ್ ತಿಳಿಸಿದರು.

‘‘ಬಾಂಗ್ಲಾದೇಶ ಸರಕಾರದಿಂದ ಚೀನಾ ಇಂಥ ಸೌಲಭ್ಯವನ್ನು ಪಡೆದಿರುವುದು ಇದೇ ಮೊದಲ ಬಾರಿಯಾಗಿದೆ. ಇಲ್ಲಿ ಚೀನಾದ ಹೂಡಿಕೆದಾರರು ಉದ್ದಿಮೆಗಳು, ಅದರಲ್ಲೂ ಮುಖ್ಯವಾಗಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ’’ ಎಂದು ‘ರಾಯ್ಟರ್ಸ್’ ಜೊತೆಗೆ ಮಾತನಾಡಿದ ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News