ಮಕ್ಕಳ ದಿನಾಚರಣೆಯ ದಿನಾಂಕ ಬದಲಿಸಬೇಕು ಎಂದ ಬಿಜೆಪಿ ಸಂಸದ!

Update: 2018-04-06 14:43 GMT

ಹೊಸದಿಲ್ಲಿ, ಎ.6: ನವೆಂಬರ್ 14ರಂದು ಆಚರಿಸಲಾಗುವ ಮಕ್ಕಳ ದಿನಾಚರಣೆಯನ್ನು ಡಿಸೆಂಬರ್ 26ರಂದು ಆಚರಿಸಬೇಕು ಎಂದು ಪಶ್ಚಿಮ ದಿಲ್ಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಆಗ್ರಹಿಸಿದ್ದಾರೆ.

ನವೆಂಬರ್ 14ರ ಬದಲಿಗೆ ಗುರು ಗೋವಿಂದ್ ಸಿಂಗ್ ರ ನಾಲ್ವರು ಮಕ್ಕಳು ಹುತಾತ್ಮರಾದ ಡಿಸೆಂಬರ್ 26ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಬೇಕು. 60 ಮಂದಿ ಬಿಜೆಪಿ ಸಂಸದರು ನನ್ನ ಮನವಿಗೆ ಬೆಂಬಲ ಸೂಚಿಸಿದ್ದಾರೆ. ಕಾಂಗ್ರೆಸ್ ಸಂಸದರ ಜೊತೆಗೂ ನಾನು ಮಾತನಾಡುತ್ತೇನೆ” ಎಂದು ಪರ್ವೇಶ್ ವರ್ಮಾ ಹೇಳಿದರು.

“ಪಂಡಿತ್ ಜವಹರಲಾಲ್ ನೆಹರೂ ಅವರ ಜನ್ಮ ದಿನದಂದು ಮಕ್ಕಳ ದಿನಾಚರಣೆಯನ್ನು ಕಾಂಗ್ರೆಸ್ ಸರಕಾರ ನಮ್ಮ ಮೇಲೆ ಹೇರಿತು. ನಾನು ಜವಹರಲಾಲ್ ನೆಹರೂ ಅವರನ್ನು ‘ಚಾಚಾ’ ಎನ್ನುತ್ತೇವೆ. ಆದ್ದರಿಂದ ಅವರ ಜನ್ಮ ದಿನಾಚರಣೆಯನ್ನು ನಾವು ಯಾಕೆ ‘ಚಾಚಾ ದಿವಸ’ವಾಗಿ ಆಚರಿಸಬಾರದು. ಮಕ್ಕಳ ದಿನಾಚರಣೆಯು ಮಕ್ಕಳ ಮೇಲೆ ಕೇಂದ್ರೀಕೃತವಾಗಿದೆ. ಆದ್ದರಿಂದ ಗೋವಿಂದ್ ಸಿಂಗ್ ರ ಮಕ್ಕಳು ಹುತಾತ್ಮರಾದ ದಿನ ಮಕ್ಕಳ ದಿನಾಚರಣೆಯನ್ನು ಆಚರಿಸಬೇಕು” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News