ಭಾರತದಲ್ಲಿ ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಪ್ರಮಾಣ ಹೆಚ್ಚಳ: ಸಮೀಕ್ಷೆ

Update: 2018-04-06 16:12 GMT

ಹೊಸದಿಲ್ಲಿ, ಎ.5: ಪ್ರತೀ ಐದು ಮಂದಿಯಲ್ಲಿ ಮೂವರು ಭಾರತೀಯರು ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸುತ್ತಿದ್ದಾರೆ. ಆದರೆ ಹೀಗೆ ಮಾಡುವ ಪ್ರತೀ ನಾಲ್ಕು ಮಂದಿಯಲ್ಲಿ ಒಬ್ಬ ಮಾತ್ರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸಿಕ್ಕಿ ಬೀಳುತ್ತಾನೆ ಎಂದು ಜಪಾನಿನ ಪ್ರಮುಖ ಮೋಟಾರು ವಾಹನ ಉತ್ಪಾದನಾ ಸಂಸ್ಥೆ ನಿಸ್ಸಾನ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ವಾಹನ ಚಲಾಯಿಸುವಾಗ ಮೊಬೈಲ್ ಬಳಸುವ ಪ್ರಕರಣ ಉತ್ತರ ಭಾರತದಲ್ಲಿ (ಶೇ.62)ಅತ್ಯಧಿಕವಾಗಿದ್ದರೆ ದಕ್ಷಿಣ ಭಾರತದಲ್ಲಿ ಶೇ.52ರಷ್ಟಿದೆ. ಅತಿವೇಗದ ಚಾಲನೆಗೆ ಸಂಬಂಧಿಸಿದ ಅಪರಾಧ ಕೃತ್ಯಗಳು ಕೇರಳದಲ್ಲಿ ವರದಿಯಾಗಿದ್ದು, ಶೇ.60ರಷ್ಟು ವಾಹನ ಚಾಲಕರು ಅತಿವೇಗದ ಚಾಲನೆಯನ್ನು ಒಪ್ಪಿಕೊಂಡಿದ್ದಾರೆ. ಆ ಬಳಿಕದ ಸ್ಥಾನದಲ್ಲಿ ದಿಲ್ಲಿ(ಶೇ.51), ಪಂಜಾಬ್ (28) ಇದೆ. ಭಾರತದ 20 ರಾಜ್ಯಗಳ 2,199 ಮಂದಿಯನ್ನು ಸಂದರ್ಶಿಸಿ ಈ ವರದಿ ತಯಾರಿಸಲಾಗಿದೆ. ವಾಹನ ಬಳಸುವ ಶೇ.53ರಷ್ಟು ಮಂದಿ ತಾವು ವಾಹನ ಚಲಾಯಿಸುವಾಗಲೂ ಮನೆಯವರ ಜೊತೆ ಸಂಪರ್ಕದಲ್ಲಿರಲು ಬಯಸುತ್ತೇವೆ ಎಂದು ತಿಳಿಸಿದ್ದು, ಇದರಿಂದ ವಾಹನದ ಒಳಗೆಯೇ ನೂತನ ಸುರಕ್ಷಾ ತಂತ್ರಜ್ಞಾನ ರೂಪಿಸುವ ಅನಿವಾರ್ಯತೆ ಎದುರಾಗಿದೆ ಎಂದು ನಿಸ್ಸಾನ್ ಮೋಟಾರ್ ಇಂಡಿಯಾದ ಆಡಳಿತ ನಿರ್ದೇಶಕ ಜೆರೊಮ್ ಸೈಗಟ್ ತಿಳಿಸಿದ್ದಾರೆ.

 ಹೊಸ ಸ್ಥಳಗಳಿಗೆ ವಾಹನದಲ್ಲಿ ತೆರಳುವ ಸಂದರ್ಭ ತಾವು ಯಾವಾಗಲೂ ದಾರಿ ತಪ್ಪುತ್ತೇವೆ ಎಂದು ಶೇ.68ರಷ್ಟು ಮಂದಿ ತಿಳಿಸಿದ್ದರೆ, ಸಮಯಪಾಲನೆ ಮಾಡಲು ವಿಫಲವಾಗುತ್ತಿದ್ದೇವೆ ಎಂದು ಶೇ.64 ಮಂದಿ ತಿಳಿಸಿದ್ದಾರೆ. ಸಮಯಪಾಲನೆಯಲ್ಲಿ ವಿಫಲವಾಗುವ ವಾಹನ ಸವಾರರ ಪ್ರಮಾಣ ಕೇರಳದಲ್ಲಿ ಶೇ.65, ಪಂಜಾಬ್‌ನಲ್ಲಿ ಶೇ.48 ಆಗಿದೆ ಎಂದು ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News