ನಿಂತು ಹಾಡದ ಗರ್ಭಿಣಿ ಗಾಯಕಿಯ ಗುಂಡಿಕ್ಕಿ ಹತ್ಯೆ

Update: 2018-04-12 08:28 GMT

ಲರ್ಕಾನ, ಎ.12: ನಿಂತು ಹಾಡದ ಕಾರಣಕ್ಕಾಗಿ ಗರ್ಭಿಣಿ ಪಾಕಿಸ್ತಾನಿ ಗಾಯಕಿಯೊಬ್ಬರನ್ನು ಗುಂಡಿಕ್ಕಿ ಕೊಂದಿರುವ ಘಟನೆ ಪಾಕಿಸ್ತಾನದ ಲರ್ಕಾನ ಜಿಲ್ಲೆಯಲ್ಲಿ ನಡೆದಿದೆ.

24 ವರ್ಷದ ಸಮೀನಾ ಸಮೂನ್ ಕಂಗಾ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು, ಗಾಯಕಿ ಹಾಡುತ್ತಿದ್ದ ಸಂದರ್ಭ ತಾರಿಕ್ ಅಹ್ಮದ್ ಎಂಬಾತ ನಿಂತುಕೊಂಡು ಹಾಡುವಂತೆ ಸೂಚಿಸಿದ. ಆದರೆ ತಾನು ಗರ್ಭಿಣಿಯಾಗಿರುವ ಕಾರಣ ನಿಂತು ಹಾಡಲು ಆಕೆ ನಿರಾಕರಿಸಿದರು. ಈ ಸಂದರ್ಭ ಕೋಪಗೊಂಡ ವ್ಯಕ್ತಿ ಆಕೆಗೆ ಗುಂಡಿಕ್ಕಿದ ಎನ್ನಲಾಗಿದೆ.

ಕೂಡಲೇ ಸಮೀನಾರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News