ಅಂಬೇಡ್ಕರ್ ಸಂವಿಧಾನವಿಲ್ಲದಿದ್ದರೆ ಹಳ್ಳಿಯಲ್ಲಿ ಕುರಿ ಮೇಯಿಸಬೇಕಾಗಿತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-04-14 13:15 GMT

ಬೆಂಗಳೂರು, ಎ. 14: ‘ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಇಲ್ಲದೆ ಇದ್ದಿದ್ದರೆ ನಾನು ಹಳ್ಳಿಯಲ್ಲಿ ಕುರಿ-ದನ ಮೇಯಿಸುತ್ತಿದ್ದೆನೋ ಏನೋ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ

ಸಂವಿಧಾನ ಶಿಲ್ಲಿ ಅಂಬೇಡ್ಕರ್ ಅವರ 127ನೆ ಜಯಂತಿ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಸಂವಿಧಾನ ರಕ್ಷಣೆಗೆ ಪಣ ತೊಡಲು ಕರೆ ನೀಡಿದ್ದಾರೆ. ನನ್ನಲ್ಲಿ ಸಾಮಾಜಿಕ ನ್ಯಾಯದ ಬದ್ಧತೆ, ಹೋರಾಟದ ಕಿಚ್ಚು ಮತ್ತು ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸಿದ್ದು ಅಂಬೇಡ್ಕರ್. ನನ್ನ ರಾಜಕೀಯ ಬದುಕು, ಅಂಬೇಡ್ಕರ್ ಚಿಂತನೆಯ ಫಲ ಎಂದು ಅವರು ಸ್ಮರಿಸಿದ್ದಾರೆ.

ಅಂಬೇಡ್ಕರ್ ರೂಪಿಸಿದ ಸಂವಿಧಾನದ ರಕ್ಷಣೆಗೆ ಪಣತೊಡಬೇಕು. ಅದೇರೀತಿ ಸಂವಿಧಾನವನ್ನು ಬದಲಾಯಿಸಲು ಹೊರಟಿರುವ ಪಟ್ಟಭದ್ರ ಶಕ್ತಿಗಳ ವಿರುದ್ಧದ ಒಗ್ಗಟ್ಟಿನ ಹೋರಾಟ ಮಾಡೋಣ. ಅಂಬೇಡ್ಕರ್ ಸಾಮಾಜಿಕ ನ್ಯಾಯದ ಹರಿಕಾರ. ಅನ್ಯಾಯ, ಅಸಮಾನತೆ ಮತ್ತು ಶೋಷಣೆಯ ವಿರುದ್ಧದ ಹೋರಾಟಕ್ಕೆ ಸ್ಪೂರ್ತಿ ಎಂದು ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News