ಅಂಬೇಡ್ಕರ್ ಹೆಸರಿಗೆ ‘ರಾಮ್ ಜಿ’ ಸೇರಿಸಿದ ಉತ್ತರಪ್ರದೇಶ ಸರಕಾರ

Update: 2018-04-14 17:52 GMT

ಪಾಟ್ನಾ, ಎ. 14: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಧ್ಯದ ಹೆಸರು ‘ರಾಮ್‌ಜಿ’ಯನ್ನು ಸರಕಾರ ಹಾಗೂ ನ್ಯಾಯಾಲಯದ ದಾಖಲೆಗಳಲ್ಲಿ ಪರಿಚಯಿಸುವುದಾಗಿ ಬಿಹಾರ ಸರಕಾರ ಶನಿವಾರ ಘೋಷಿಸಿದೆ.

ಡಾ. ಬಿ.ಆರ್. ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆಯಾದ ಶನಿವಾರ ಬಿಹಾರ್ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದ ದಾಖಲೆಗಳಲ್ಲಿ ಅಂಬೇಡ್ಕರ್ ಅವರ ಮಧ್ಯದ ಹೆಸರು ‘ರಾಮ್ ಜಿ’ಯನ್ನು ಉತ್ತರಪ್ರದೇಶದ ಆದಿತ್ಯನಾಥ್ ಅವರ ಸರಕಾರ ಪರಿಚಯಿಸಿದ ಒಂದು ತಿಂಗಳ ಬಳಿಕ ಬಿಹಾರ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ. ಅಂಬೇಡ್ಕರ್ ಅವರ ಹೆಸರನ್ನು ಸರಿಯಾಗಿ ಬರೆಯುವ ಅಭಿಯಾನವನ್ನು ಉತ್ತರಪ್ರದೇಶದ ರಾಜ್ಯಪಾಲ ರಾಮ್ ನಾಯ್ಕಾ 2017 ಡಿಸೆಂಬರ್‌ನಲ್ಲಿ ಆರಂಭಿಸಿದರು. ಸಂವಿಧಾನದ ಪಿತಾಮಹ ಎಂದು ಕರೆಯಲಾಗುವ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಜೂರಿ, ಅರ್ಥಶಾಸ್ತ್ರಜ್ಞ, ರಾಜಕಾರಣಿ ಹಾಗೂ ಸಾಮಾಜಿಕ ಸುಧಾರಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News