ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲೇ ಕಚೇರಿ ಮಾಡಲು ಆದ್ಯತೆಯ ನಗರ ನಮ್ಮ ಬೆಂಗಳೂರು

Update: 2018-04-19 13:42 GMT

ಬೆಂಗಳೂರು,ಎ.19: ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ಕಚೇರಿ ವಿಸ್ತರಣೆಗೆ ಅತ್ಯಂತ ಹೆಚ್ಚು ಆದ್ಯತೆಯ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ ಎಂದು 'ಸಿಬಿಆರ್ ಇ ಏಷ್ಯಾ ಪೆಸಿಫಿಕ್ ಆಕ್ಯುಪೈಯರ್ ಸರ್ವೇ 2018' ವರದಿಯೊಂದು ತಿಳಿಸಿದೆ. ಬೆಂಗಳೂರಿನ ನಂತರದ ಸ್ಥಾನಗಳು ಶಾಂಘೈ ಮತ್ತು ಸಿಂಗಾಪುರಕ್ಕೆ ಹೋಗಿದೆ.

ಶಾಂಘೈ ನಗರದಲ್ಲಿ ಸಾಕಷ್ಟು ಹೊಸ ಆಫೀಸ್ ಸ್ಥಳಗಳಿದ್ದರೂ ಹೆಚ್ಚುತ್ತಿರುವ ವಿಸ್ತರಣಾ ಬೇಡಿಕೆಗಳ ಕಾರಣದಿಂದಾಗಿ ಬಾಡಿಗೆಗೆ ಸಂಬಂಧಿಸಿದಂತೆ ಕೆಳಮುಖ ಒತ್ತಡವನ್ನು ಮಿತಿಗೊಳಿಸಲಿದೆ ಎಂದು ವರದಿ ತಿಳಿಸಿದೆಯಲ್ಲದೆ ಇದಕ್ಕೆ ತದ್ವಿರುದ್ಧವಾಗಿ ಪ್ರಮುಖ ಕ್ಷೇತ್ರಗಳ ಹೊಸ ಯೋಜನೆಗಳಿಗೆ ಜಾಗ ಲಭ್ಯತೆ ಕುರಿತು ಪೂರ್ವ ಬದ್ಧತೆಗಳಿಂದಾಗಿ ಜಾಗ ಲಭ್ಯತೆಯನ್ನು ಮತ್ತಷ್ಟು ಕಷ್ಟಗೊಳಿಸುತ್ತಿದೆ,'' ಎಂದು  ಹೇಳಿದೆ.

ಸಿಂಗಾಪುರದಲ್ಲಿ ಕೂಡ ಆಫೀಸ್ ಜಾಗಗಳ ಕೊರತೆಯಿದೆ ಎಂದು ಹೇಳಿದ ವರದಿ, ಬಹುರಾಷ್ಟ್ರೀಯ ಕಂಪೆನಿಗಳು ಬೆಂಗಳೂರಿನಲ್ಲಿ ಮತ್ತು ದೇಶದ ಇತರ ಸಣ್ಣ ನಗರಗಳಲ್ಲಿ ವಿಸ್ತರಣೆಯ ನಿಟ್ಟಿನಲ್ಲಿ ಗಮನ ನೀಡುತ್ತಿದ್ದು, ದಿಲ್ಲಿ ಹಾಗೂ ಮುಂಬೈಯಲ್ಲಿ ಈ ನಿಟ್ಟಿನಲ್ಲಿ ಹೆಚ್ಚು ಬೇಡಿಕೆಯಿಲ್ಲ ಎಂದು ವರದಿ ತಿಳಿಸಿದೆ.

ಒಟ್ಟು 50 ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಏಷ್ಯಾದ ದೊಡ್ಡ ಕಾರ್ಪೊರೇಟ್ ಕಂಪೆನಿಗಳು ಅಕ್ಟೋಬರ್-ಡಿಸೆಂಬರ್ 2017ರಲ್ಲಿ ನಡೆಸಲಾದ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News