ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿ ಮರುಆಯ್ಕೆ

Update: 2018-04-22 17:42 GMT

ಹೈದರಾಬಾದ್, ಎ. 22: ಸಿಪಿಎಂನ ಪ್ರಧಾನ ಕಾರ್ಯದರ್ಶಿ ಯಾಗಿ ಸೀತಾರಾಮ್ ಯೆಚೂರಿ ಮುಂದುವರಿಯಲಿದ್ದಾರೆ ಹೈದರಾ ಬಾದ್‌ನಲ್ಲಿ ರವಿವಾರ ನಡೆದ ಪಕ್ಷದ 22ನೇ ಮಹಾ ಅಧಿವೇಶನದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಪಕ್ಷದ ಪ್ರಧಾನ ಕಾಯದರ್ಶಿ ಹುದ್ದೆಗೆ ಎರಡನೇ ಬಾರಿ ಆಯ್ಕೆಯಾಗುತ್ತಿರುವ ಯೆಚೂರಿ ಅವರನ್ನು ಎಡಪಕ್ಷಕ್ಕೆ ನೂತನವಾಗಿ ಆಯ್ಕೆಯಾದ 95 ಸದಸ್ಯರು ಇದ್ದ ಕೇಂದ್ರ ಸಮಿತಿ ಅನುಮೋದನೆ ನೀಡಿದೆ.

2015ರಲ್ಲಿ ವಿಶಾಖಪಟ್ಟಣಂನಲ್ಲಿ ಆಯೋಜಿಸಿದ್ದ ಪಕ್ಷದ 21ನೇ ಮಹಾ ಅಧಿವೇಶನದಲ್ಲಿ 65 ಹರೆಯದ ಸೀತಾರಾಮ ಯೆಚೂರಿ ಸಿಪಿಐ (ಎಂ)ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಕಾಶ್ ಕಾರಟ್ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ‘‘ನಾವು ಮಹತ್ವಪೂರ್ಣ ಮಹಾ ಅಧಿವೇಶನವನ್ನು ನಡೆಸಿದ್ದೇವೆ. ವಿಸ್ತೃತ ಚರ್ಚೆ ಹಾಗೂ ಪ್ರಮುಖ ಚರ್ಚೆಯ ಬಳಿಕ ನಾವು ನಿರ್ಧಾರ ತೆಗೆದುಕೊಂಡೆವು. ನಮ್ಮ ಪಕ್ಷವು ಏಕೀಕೃತ ಪಕ್ಷವಾಗಿ ಹೊರಹೊಮ್ಮಿದೆ ಎಂಬ ಸಂದೇಶ ನಮ್ಮ ಶತ್ರುಗಳಿಗೆ ರವಾನೆಯಾಗಬೇಕಿದೆ’’ ಎಂದು ಯೆಚೂರಿ ಪಕ್ಷದ ಮಹಾ ಅಧಿವೇಶನದ ಸಮಾರೋಪದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News