ಸೂಕ್ತ ದಾಖಲೆ ಕೊರತೆ: ಎಟಿಎಂಗೆ ತುಂಬಿಸಲು ಸಾಗಿಸುತ್ತಿದ್ದ 2.19 ಕೋಟಿ ವಶಕ್ಕೆ

Update: 2018-04-22 15:36 GMT

ಬೆಂಗಳೂರು, ಎ.22: ಸೂಕ್ತ ದಾಖಲೆ ಇಲ್ಲದ ಕಾರಣ ಎಟಿಎಂಗೆ ತುಂಬಿಸಲು ಸಾಗಿಸುತ್ತಿದ್ದ 2 ಕೋಟಿ 19 ಲಕ್ಷ ರೂ ಹಣವನ್ನು ಹಲಸೂರು ಕೆರೆಯ ಬಳಿ ಚುನಾವಣಾಧಿಕಾರಿಗಳು ವಶಪಡಿಸಿಕೊಂಡು ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಿದ್ದಾರೆ.

ನಗರದ ವೈಟ್‌ಫೀಲ್ಡ್‌ನಲ್ಲಿ ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್‌ನ ಎಟಿಎಂಗಳಿಗೆ ತುಂಬಿಸಬೇಕಿತ್ತು. ರೈಟರ್ಸ್ ಸೇಫ್ ಗಾರ್ಡ್ಸ್ ಸಂಸ್ಥೆಗೆ ಸೇರಿದ ಎಟಿಎಂಗಳಿಗೆ ಹಣ ಹಾಕಲು ಸಾಗಿಸುತ್ತಿದ್ದ ವಾಹನದ ದಾಖಲಾತಿಗೂ ಅದನ್ನು ತೆಗೆದುಕೊಂಡು ಹೋಗುತ್ತಿದ್ದವರ ಬಳಿಯಿದ್ದ ದಾಖಲಾತಿಗೂ ವ್ಯತ್ಯಾಸ ಕಂಡುಬಂದಿದೆ.

ಬಳಿಕ ಸ್ಥಳಕ್ಕೆ ಬಂದ ಮ್ಯಾನೇಜರ್ ಮಧುಸೂದನ್ ನೀಡಿದ ದಾಖಲೆಯಿಂದ ಐಟಿ ಅಧಿಕಾರಿಗಳು ಸಮಾಧಾನಗೊಳ್ಳಲಿಲ್ಲ. ಹೆಚ್ಚುವರಿ ದಾಖಲೆ ಸಲ್ಲಿಸುವಂತೆ ಸೂಚಿಸಿದ್ದು, ಇದರಿಂದಾಗಿ. 24 ಎಟಿಎಂಗಳಿಗೆ ಬೇಕಾದಷ್ಟು ದುಡ್ಡು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಶದಲ್ಲಿದೆ ಎಂದು ಮೂಲಗಳು ತಿಳಿಸಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News