ವಿಧಾನಸಭಾ ಚುನಾವಣೆ: ಬಿಜೆಪಿಯ 4ನೆ ಪಟ್ಟಿ ಬಿಡುಗಡೆ

Update: 2018-04-23 12:33 GMT

ಬೆಂಗಳೂರು, ಎ. 23: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲಿರುವ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಬಿಡುಗಡೆ ಮಾಡಿದ್ದು, ಯಶವಂತಪುರಕ್ಕೆ ಚಿತ್ರನಟ ಜಗ್ಗೇಶ್, ಕನಕಪುರಕ್ಕೆ ನಂದಿನಿಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ನಾಲ್ಕನೇ ಪಟ್ಟಿಯಲ್ಲಿ 7 ಅಭ್ಯರ್ಥಿಗಳ ಹೆಸರು ಪ್ರಕಟಗೊಂಡಿದ್ದು, ಮೊದಲ ಪಟ್ಟಿಯಲ್ಲಿ 72 ಅಭ್ಯರ್ಥಿಗಳನ್ನು ಘೋಷಿಸಿದ್ದ ಬಿಜೆಪಿ, ಎರಡನೇ ಪಟ್ಟಿಯಲ್ಲಿ 82 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಮೂರನೇ ಪಟ್ಟಿಯಲ್ಲಿ 59 ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಲಾಗಿತ್ತು.

ರಾಜ್ಯ ರಾಜಕೀಯ ವಲಯ ಹಾಗೂ ಸಾರ್ವಜನಿಕರಲ್ಲಿ ಭಾರೀ ನಿರೀಕ್ಷೆ ಮತ್ತು ತೀವ್ರ ಕುತೂಹಲ ಸೃಷ್ಟಿಸಿರುವ ಮೈಸೂರಿನ ವರುಣಾ, ಬಾಗಲಕೋಟೆ ಜಿಲ್ಲೆಯ ಬಾದಾಮಿ, ಹಾಸನ ಜಿಲ್ಲೆ ಸಕಲೇಶಪುರ ಹಾಗೂ ಕೋಲಾರ ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ.

ಬಿಜೆಪಿ ನಾಲ್ಕನೇ ಪಟ್ಟಿ: ಭದ್ರಾವತಿ-ಜಿ.ಆರ್.ಪ್ರವೀಣ್ ಪಾಟೀಲ್, ಯಶವಂತಪುರ-ಜಗ್ಗೇಶ್, ಬಿಟಿಎಂ ಲೇಔಟ್-ಲಲ್ಲೇಶ್ ರೆಡ್ಡಿ, ರಾಮನಗರ -ಎಚ್.ಲೀಲಾವತಿ, ಕನಕಪುರ-ನಂದಿನಿ ಗೌಡ, ಬೇಲೂರು-ಎಚ್.ಕೆ.ಸುರೇಶ್ ಹಾಗೂ ಹಾಸನ-ಜೆ.ಪ್ರೀತಂ ಗೌಡ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News