14-16 ವರ್ಷದವರು ಮಕ್ಕಳಲ್ಲವೇ: ಕೇಂದ್ರ ಸರಕಾರಕ್ಕೆ ಕಮಲ್‍ ಹಾಸನ್ ಪ್ರಶ್ನೆ

Update: 2018-04-23 16:01 GMT

ಚೆನ್ನೈ, ಎ. 23: 12 ವರ್ಷಕ್ಕಿಂತ ಕೆಳವಯೋಮಾನದ ಮಕ್ಕಳ ವಿರುದ್ಧ ನಡೆಯುವ ಅತ್ಯಾಚಾರ ಪ್ರಕರಣಗಳಿಗೆ ಗಲ್ಲುಶಿಕ್ಷೆ ನೀಡುವ ಪ್ರಸ್ತಾಪದ ಕುರಿತು ಅಚ್ಚರಿ ವ್ಯಕ್ತಪಡಿಸಿರುವ ನಟ, ರಾಜಕಾರಣಿ ಕಮಲ್ ಹಾಸನ್ "ಹಾಗಾದರೆ 14, 15, 16 ವರ್ಷದ ಬಾಲಕಿಯರು ಮಕ್ಕಳಲ್ಲವೇ" ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ.

ಯುಟ್ಯೂಬ್ ಮೂಲಕ ತನ್ನ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಕ್ಕಳ ಕುರಿತು ಆಯಾ ಕುಟುಂಬಗಳೇ ಎಚ್ಚರವಹಿಸಬೇಕು ಎಂದರು. "12 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಅತ್ಯಾಚಾರ ಮಾಡಿದವರಿಗೆ ಮಾತ್ರ ಏಕೆ ಗಲ್ಲುಶಿಕ್ಷೆ...14,15,16 ವರ್ಷದವರು ಮಕ್ಕಳಲ್ಲವೇ?, ಅವರು ಮಹಿಳೆಯಾಗಿ ಬದಲಾಗುವುದಕ್ಕೆ ಇನ್ನೂ ಕೆಲ ವರ್ಷಗಳಿವೆ" ಎಂದವರು ಹೇಳಿದರು

12 ವರ್ಷಕ್ಕಿಂತ ಕೆಳವಯೋಮಾನದವರ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಸುಗ್ರೀವಾಜ್ಞೆಗೆ ನಿನ್ನೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ. 

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಮಲ್ ಹಾಸನ್, "ನಾನೇನು ಆಗಬೇಕೆಂದು ನೀವೇ ನಿರ್ಣಯಿಸಿ. ಒಂದೋ ಮುಖ್ಯಮಂತ್ರಿ ಅಥವಾ ವಿಪಕ್ಷ ನಾಯಕ..." ಎಂದರು. ಜಾತಿ ಪದ್ಧತಿಯು ಒಂದು ರೋಗವೆಂದ ಅವರು, ಜಾತಿ ಪದ್ಧತಿ ಕೊನೆಗೊಳ್ಳಬೇಕಿದೆ. ಜಾತಿ ಆಧಾರಿತ ಭೇದಭಾವ ಬಡತನಕ್ಕೆ ಕಾರಣವಾಗಿದೆ. ಜಾತಿ ವ್ಯವಸ್ಥೆ ಶೀಘ್ರದಲ್ಲಿ ಕೊನೆಗೊಳ್ಳಬೇಕು. ಈ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು ಎನ್ನುವುದು ತನ್ನ ವೈಯಕ್ತಿಕ ಅಭಿಪ್ರಾಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News