ಉಷ್ಣಾಂಶಕ್ಕೆ ಕಾರ್ಬನ್ ಡೈ ಆಕ್ಸೈಡ್ ಕಾರಣ: ವಿಜ್ಞಾನಿ ಡಾ.ಎಸ್.ಎಸ್.ದೇಸಾಯಿ

Update: 2018-04-23 17:08 GMT

ಬೆಂಗಳೂರು, ಎ.23: ಭೌಗೋಳಿಕವಾಗಿ ಉಷ್ಣಾಂಶ ಹೆಚ್ಚಳದಿಂದಾಗಿ ಹಲವು ಪರಿಣಾಮಗಳುಂಟಾಗುತ್ತಿವೆ. ಇದಕ್ಕೆ ಕಾರ್ಬನ್ ಡೈ ಆಕ್ಸೈಡ್‌ನ ಹೆಚ್ಚಳ ಎಂದು ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯದ ನಿವೃತ್ತ ವಿಜ್ಞಾನಿ ಡಾ.ಎಸ್.ಎಸ್.ದೇಸಾಯಿ ಆತಂಕ ವ್ಯಕ್ತಪಡಿಸಿದರು.

ಸೋಮವಾರ ನಗರದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಭೂಗೋಳ ಶಾಸ್ತ್ರ ವಿಭಾಗದಲ್ಲಿ ಆಯೋಜಿಸಿದ್ದ, ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಡಿದರು. ಸೂರ್ಯನ ಶಕ್ತಿಯೊಂದೇ ಭೂಮಿಗೆ ಜೀವಾಳವಾಗಿದೆ. ಆದರೆ, ಭೂಮಿಯ ಮೇಲಿನ ಮಾನವ ಅಳಿವಿನ ಅಂಚಿನಲ್ಲಿದ್ದು, ಪ್ರಾಣಿಗಳೂ ಸೇರಿದಂತೆ ಭೂಮಂಡಲವೇ ಭೌಗೋಳಿಕವಾಗಿ ಉಷ್ಣಾಂಶ ಹೆಚ್ಚಳದಿಂದಾಗಿ ಹಲವು ಪರಿಣಾಮಗಳುಂಟಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ ಕಾರ್ಬನ್ ಡೈ ಆಕ್ಸೈಡ್‌ನ ಹೆಚ್ಚಳ ಎಂದರು.

ವ್ಯವಸಾಯ ನಿರತರು ಕಡಿಮೆಯಾಗಿ ಆಹಾರಧಾನ್ಯಗಳ ಬೆಳವಣಿಗೆ ಯಾಂತ್ರಿಕತೆಯತ್ತ ನಡೆದು ಅಲ್ಲಿಯೂ ಹಲವು ಪರಿಣಾಮಗಳಾಗುತ್ತಿವೆ. ಆದ್ದರಿಂದ ತಾಯಿಯಾದ ಭೂಮಿಯ ಸಂರಕ್ಷಣೆ ಅತ್ಯಗತ್ಯ. ಇದಕ್ಕಾಗಿ ಸಂಶೋಧನಾ ವಿದ್ಯಾರ್ಥಿಗಳು ಹಲವು ಸಂಶೋಧನೆ ಕೈಗೊಳ್ಳಬೇಕು ಎಂದು ಕರೆ ನೀಡಿದರು.

ಭೂಮಿಯ ಹಸಿರು ವಲಯವನ್ನು ಹೆಚ್ಚಿಸಬೇಕು. ಅದೇ ರೀತಿ, ವನ ಮಹೋತ್ಸವ, ನೀರಿನ ಸಂರಕ್ಷಣೆಯ ಅರಿವು, ಅಂತರ್ಜಲ ಹೆಚ್ಚಿಸುವ ಸಲಹೆ, ಸಿಹಿ ನೀರಿನ ಭೂಸ್ವೀಕರಣ ತಡೆಯುವ ಕಾರ್ಯಕ್ರಮಗಳು ಈ ದಿಸೆಯಲ್ಲಿ ಸಹಾಯಕವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭೂಗೋಳಶಾಸ್ತ್ರದ ಮುಖ್ಯಸ್ಥ ಪ್ರೊ.ಎ.ಎಸ್.ರಾಯಮಾನೆ, ಸಂಯೋಜಕ ಪ್ರೊ.ಅಶೋಕ್ ಡಿ ಹಂಜಗಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಈಶ್ವರಪ್ಪ ಸೇರಿ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News