ಬಿಬಿಎಂಪಿ ತೆರಿಗೆ ಪಾವತಿ ಹೆಚ್ಚಳ: 20 ದಿನದಲ್ಲಿ 365 ಕೋಟಿ ಸಂಗ್ರಹ

Update: 2018-04-23 17:09 GMT

ಬೆಂಗಳೂರು, ಎ.23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಆನ್‌ಲೈನ್‌ನಲ್ಲಿ ಆಸ್ತಿ ತೆರಿಗೆ ಪಾವತಿಗಿದ್ದ ಸಮಸ್ಯೆಯನ್ನು ನಿವಾರಣೆ ಮಾಡಿದ್ದು, ತೆರಿಗೆ ಪಾವತಿದಾರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಕೇವಲ 20 ದಿನದಲ್ಲಿ ಒಟ್ಟು 365 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. 2 ಲಕ್ಷಕ್ಕೂ ಅಧಿಕ ಜನರು ತೆರಿಗೆ ಪಾವತಿಸಿದ್ದಾರೆ. ಹಿಂದಿನ ಆರ್ಥಿಕ ವರ್ಷಗಳಿಗೆ ಹೋಲಿಸಿದರೆ ಮೊದಲ 20 ದಿನಗಳಲ್ಲಿ ಸಂಗ್ರಹವಾದ ಅತಿ ಹೆಚ್ಚು ತೆರಿಗೆ ಇದಾಗಿದೆ. ಆನ್‌ಲೈನ್ ಮೂಲಕ 145 ಕೋಟಿ ರೂ. ಮತ್ತು ಚಲನ್‌ಗಳ ಮೂಲಕ 215 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಎ.30ರೊಳಗೆ ಶೇ.5 ರಷ್ಟು ರಿಯಾಯಿತಿಯಲ್ಲಿ ತೆರಿಗೆ ಪಾವತಿ ಮಾಡಲು ಅವಕಾಶವಿದೆ. ಈ ಬಾರಿ ಅವಧಿ ವಿಸ್ತರಣೆ ಮಾಡುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News