ಚರ್ಚ್ ಮೇಲೆ ಗುಂಡಿನ ದಾಳಿ: 18 ಮಂದಿ ಮೃತ್ಯು

Update: 2018-04-25 08:38 GMT

ನೈಜೀರಿಯಾ, ಎ.25: ಚರ್ಚ್ ನಲ್ಲಿ ನಡೆಯುತ್ತಿದ್ದ ಸಮಾರಂಭದ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 18 ಮಂದಿ ಮೃತಪಟ್ಟ ಘಟನೆ ಕೇಂದ್ರ ನೈಜೀರಿಯಾದ ಬೆನುವಿನಲ್ಲಿ ನಡೆದಿದೆ.

ಇಲ್ಲಿ ಜನವರಿಯಲ್ಲಿ ನಡೆದಿದ್ದ ಕೋಮುಗಲಭೆಯಲ್ಲಿ 72 ಮಂದಿ ಮೃತಪಟ್ಟಿದ್ದರು ಎನ್ನಲಾಗಿದೆ. ಚರ್ಚ್ ನಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿದ್ದ ಸಂದರ್ಭ ಗುಂಡಿನ ದಾಳಿ ನಡೆದಿದ್ದು. ಚರ್ಚ್  ಪಾದ್ರಿ ಸಹಿತ 18 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ದಾಳಿಯನ್ನು ನೈಜೀರಿಯಾ ಅಧ್ಯಕ್ಷ ಮುಹಮ್ಮದ್ ಬುಹಾರಿ ಖಂಡಿಸಿದ್ದಾರೆ. ಚರ್ಚ್ ಮೇಲಿನ ದಾಳಿಯ ನಂತರ ಬೆನೂವಲ್ಲಿ ಗಲಭೆ ಆರಂಭಗೊಂಡಿದೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರವಾಯು ಪ್ರಯೋಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News