ಹೊಸ ಪಕ್ಷ ಸ್ಥಾಪಿಸಿದ ಬೈಚುಂಗ್ ಭುಟಿಯಾ

Update: 2018-04-26 13:40 GMT

ಹೊಸದಿಲ್ಲಿ, ಎ.26: ತೃಣಮೂಲ ಕಾಂಗ್ರೆಸನ್ನು ತೊರೆದ 2 ತಿಂಗಳ ನಂತರ ಭಾರತ ಫುಟ್ ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ಹೊಸ ಪಕ್ಷವೊಂದನ್ನು ಸ್ಥಾಪಿಸಿದ್ದಾರೆ. ‘ಹಮ್ರೋ ಸಿಕ್ಕಿಂ’ ಅವರ ನೂತನ ಪಕ್ಷದ ಹೆಸರು.

ರಾಜ್ಯದಲ್ಲಿ ಭ್ರಷ್ಟಾಚಾರ ಹಾಗು ನಿರುದ್ಯೋಗದ ಕುರಿತು ತನ್ನ ಪಕ್ಷವು ಹೆಚ್ಚಿನ ಗಮನ ಹರಿಸಲಿದೆ ಎಂದವರು ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ನಡದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಫುಟ್ಬಾಲ್ ಮೂಲಕ ಇಮೇಜನ್ನು ಬೆಳೆಸಲು ನನಗೆ 20 ವರ್ಷಗಳೇ ಬೇಕಾಯಿತು. ರಾಜಕೀಯದಿಂದ ಅದು ಕೆಡಲು ನಾನು ಬಯಸುವುದಿಲ್ಲ ಎಂದು ನಾನು ಈ ಮೂಲಕ ಜನರಿಗೆ ಭರವಸೆ ನೀಡುತ್ತೇನೆ ಎಂದವರು ಹೇಳಿದರು.

2014ರ ಲೋಕಸಭಾ ಚುನಾವಣೆಯಲ್ಲಿ ದಾರ್ಜಲಿಂಗ್ ನಿಂದ ಹಾಗು 2016 ವಿಧಾನಸಭಾ ಚುನಾವಣೆಯಲ್ಲಿ ಸಿಲಿಗುರಿಯಿಂದ ಅವರು ಸ್ಪರ್ಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News