ಕಾಂಗ್ರೆಸ್, ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಇಲ್ಲಿದೆ

Update: 2018-04-26 14:36 GMT

ಬೆಂಗಳೂರು, ಎ.26: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ನಟ ಅಂಬರೀಷ್ ಸೇರಿದಂತೆ 40 ಮಂದಿ ಪಟ್ಟಿಯಲ್ಲಿದ್ದಾರೆ.

ಕಾಂಗ್ರೆಸ್ ಸ್ಟಾರ್ ಪ್ರಚಾರಕರು: ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಎಸ್.ಆರ್.ಪಾಟೀಲ್, ಗುಲಾಂ ನಬಿ ಆಝಾದ್, ದಿನೇಶ್ ಗುಂಡೂರಾವ್, ಅಶೋಕ್ ಶಂಕರ್ ರಾವ್ ಚವಾಣ್.
ಸಚಿನ್ ಪೈಲಟ್, ಚಿರಂಜೀವಿ, ಖುಷ್ಬೂ, ಮುಹಮ್ಮದ್ ಅಝರುದ್ದೀನ್, ಜ್ಯೋತಿರಾದಿತ್ಯ ಸಿಂಧ್ಯಾ, ಸುಷ್ಮಿತಾ ದೇವ್, ಊಮನ್ ಚಾಂಡಿ, ಶಶಿ ತರೂರ್, ರಮ್ಯಾ, ಅಂಬರೀಷ್, ವೀರಪ್ಪ ಮೊಯ್ಲಿ, ಬಿ.ಕೆ.ಹರಿಪ್ರಸಾದ್, ಸತೀಶ್ ಜಾರಕಿಹೊಳಿ, ಕೆ.ಎಚ್.ಮುನಿಯಪ್ಪ, ಸಿ.ಎಂ.ಇಬ್ರಾಹೀಂ, ಮುಖ್ಯಮಂತ್ರಿ ಚಂದ್ರು.
ಎಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆ, ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಆರ್.ರೋಷನ್ ಬೇಗ್, ಎಚ್.ಸಿ.ಮಹದೇವಪ್ಪ, ಶಬ್ಬೀರ್ ಅಲಿ, ಝಮೀರ್ ಅಹ್ಮದ್, ರಾಣಿ ಸತೀಶ್, ಧನಂಜಯಕುಮಾರ್, ಮಾಲಾಶ್ರೀ ಪಟ್ಟಿಯಲ್ಲಿದ್ದಾರೆ.

ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಒಟ್ಟು 40 ನಾಯಕರನ್ನು ಪಕ್ಷದ ಸ್ಟಾರ್ ಪ್ರಚಾರಕರಾಗಿ ಬಿಜೆಪಿ ನೇಮಿಸಿದೆ.

ಬಿಜೆಪಿ ಸ್ಟಾರ್ ಪ್ರಚಾರಕರು: ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ಡಿ.ವಿ.ಸದಾನಂದಗೌಡ, ಅನಂತಕುಮಾರ್, ಪ್ರಕಾಶ್ ಜಾವಡೇಕರ್, ಪಿಯೂಷ್ ಗೋಯಲ್, ರವಿಶಂಕರ್ ಪ್ರಸಾದ್, ಸ್ಮೃತಿ ಇರಾನಿ, ತಾವರ್‌ಚಂದ್ ಗೆಹ್ಲೊಟ್, ಅನಂತ್‌ ಕುಮಾರ್ ಹೆಗಡೆ, ಸಾಧ್ವಿ ನಿರಂಜನ ಜ್ಯೋತಿ, ರಮೇಶ್ ಜಿಗಜಿಣಗಿ.
ಆದಿತ್ಯನಾಥ್, ಶಿವರಾಜ್ ಸಿಂಗ್ ಚೌಹಾಣ್, ದೇವೇಂದ್ರ ಫಡ್ನವಿಸ್, ರಾಮ್‌ಲಾಲ್, ಪಿ.ಮುರಳೀಧರರಾವ್, ಡಿ.ಪುರಂದೇಶ್ವರಿ, ಬಿ.ಎಲ್.ಸಂತೋಷ್, ಅರುಣ್ ಕುಮಾರ್, ಎಸ್.ಎಂ.ಕೃಷ್ಣ, ಪ್ರಹ್ಲಾದ್ ಜೋಶಿ, ಹೇಮಾ ಮಾಲಿನಿ, ಮನೋಜ್ ತಿವಾರಿ, ಬಿ.ಶ್ರೀರಾಮುಲು, ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ.
ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಎನ್.ರವಿಕುಮಾರ್, ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ತಾರಾ ಅನುರಾಧ, ಶ್ರುತಿ ಪಟ್ಟಿಯಲ್ಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News