ಬಾಲಕಿಯನ್ನು ಅತ್ಯಾಚಾರಗೈದ ಬಾಲಕ ಪೊಲೀಸ್ ವಶಕ್ಕೆ

Update: 2018-04-27 13:16 GMT

ಹೊಸದಿಲ್ಲಿ, ಎ. 26: ಬಾಲಕನೋರ್ವ 10 ವರ್ಷದ ಬಾಲಕಿಯನ್ನು ಆಕೆಯ ಮನೆಯಿಂದ ಮದ್ರಸಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಪೂರ್ವ ದಿಲ್ಲಿಯ ಘಾಝಿಪುರದಲ್ಲಿ ನಡೆದಿದೆ. ಈ ಕೃತ್ಯದಲ್ಲಿ ಮದ್ರಸದ ಮೌಲ್ವಿಯೊಬ್ಬ ಭಾಗಿಯಾಗಿದ್ದಾನೆ ಎನ್ನಲಾಗಿದ್ದು, ಆತನನ್ನು ಬಂಧಿಸುವಂತೆ ಆಗ್ರಹಿಸಿ ಸ್ಥಳೀಯರು ಧರಣಿ ನಡೆಸಿದ್ದಾರೆ.

ಕ್ರೈಮ್ ಬ್ರಾಂಚ್ ತಂಡ ಬುಧವಾರ ಮದ್ರಸಕ್ಕೆ ಬೇಟಿ ನೀಡಿ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ನಿವಾಸಿಗಳು, ಸಂದರ್ಶಕರ ವಿಚಾರಣೆ ನಡೆಸಿದ್ದಾರೆ. ಮಾರುಕಟ್ಟೆಗೆ ತೆರಳಿದ ತನ್ನ ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಬಾಲಕಿಯ ತಂದೆ ಎಪ್ರಿಲ್ 21ರಂದು ಪೊಲೀಸರಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುವ ವೇಳೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಬಾಲಕ ಬಾಲಕಿಯನ್ನು ಕರೆದೊಯ್ಯುತ್ತಿರುವುದು ಕಂಡು ಬಂತು. ಪೊಲೀಸರು ಮದ್ರಸದಲ್ಲಿ ಬಾಲಕನನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡರು. ಬಾಲಕಿ ಕೂಡ ಅಲ್ಲೇ ಪತ್ತೆಯಾಗಿದ್ದಳು. ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು ಬಾಲಕನನ್ನು ಬಾಲ ನ್ಯಾಯ ಗೃಹಕ್ಕೆ ಕಳುಹಿಸಿಕೊಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News