ಸತತ ಮೂರು ವರ್ಷಗಳ ಪ್ರಯತ್ನಕ್ಕೆ ಫಲ ಸಿಕ್ಕಿದೆ

Update: 2018-04-28 08:05 GMT

ಬೆಂಗಳೂರು, ಎ.28: 2017ರ ಯುಪಿಎಸ್ಸಿ ಪರೀಕ್ಷಾ ಫಲಿತಾಂಶವು ಶುಕ್ರವಾರ ಪ್ರಕಟಗೊಂಡಿದ್ದು, ಕರ್ನಾಟಕದ ಬೀದರ್ ನಿವಾಸಿಯಾಗಿರುವ ನದೀಮ್ 656ನೆ ರ್ಯಾಂಕ್ ಗಳಿಸುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ.

ಬೀದರ್ ಜಿಲ್ಲೆಯವರಾಗಿರುವ ನದೀಮ್ ಇಲ್ಲಿನ ಕೇಂದ್ರ ವಿದ್ಯಾಲಯದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ನಂತರ ಪಿಯುಸಿ ವಿದ್ಯಾಭ್ಯಾಸವನ್ನು ಹೈದರಾಬಾದ್ ನ ಸಿ. ಸುಕನ್ಯಾ ಜೂನಿಯರ್ ಕಾಲೇಜಿನಲ್ಲಿ ಪಡೆದ ನದೀಮ್ ಬೆಂಗಳೂರಿನ ಎಂ.ಎಸ್.ರಾಮನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಶಿಕ್ಷಣ ಪಡೆದರು. ಬೆಂಗಳೂರಿನ ಶಾಹಿನ್ ಸಿವಿಲ್ ಸರ್ವಿಸ್ ಅಕಾಡಮಿಯಲ್ಲಿ ಯುಪಿಎಸ್ಸಿ ತರಬೇತಿ ಪಡೆದರು.

ನದೀಮ್ ರ ತಂದೆ ಮುಹಮ್ಮದ್ ನಯೀಮುದ್ದೀನ್ ಸಹಾಯಕ ಪ್ರಾಧ್ಯಾಪಕರಾಗಿದ್ದರೆ, ತಾಯಿ ಸಬಿಯಾ ಸುಲ್ತಾನ ಗೃಹಿಣಿ. ರ್ಯಾಂಕ್ ಗಳಿಸಿದ ಬಗ್ಗೆ ‘ವಾರ್ತಾ ಭಾರತಿ’ ಜೊತೆ ಮಾತನಾಡಿದ ನದೀಮ್, “ತುಂಬಾ ಖುಷಿಯಾಗುತ್ತಿದೆ. ಇದು ನನ್ನ 2ನೆ ಪ್ರಯತ್ನ. ಈ ಹಿಂದೆ ಮೈನ್ಸ್ ಪರೀಕ್ಷೆ ಬರೆದಿದ್ದೆ. ಆದರೆ ರ್ಯಾಂಕ್ ಸಿಕ್ಕಿರಲಿಲ್ಲ. ಸತತ 3 ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ 656ನೆ ರ್ಯಾಂಕ್ ಲಭಿಸಿದೆ. ಆದರೆ ನನಗೆ ಭಾರತೀಯ ಪೊಲೀಸ್ ಸೇವೆಗೆ ಸೇರಬೇಕೆಂಬ ಕನಸಿದೆ. ಅದಕ್ಕಾಗಿ ಮತ್ತೊಮ್ಮೆ ಪರೀಕ್ಷೆ ಬರೆಯುತ್ತೇನೆ. ಐಪಿಎಸ್ ನನ್ನ ಮೊದಲ ಆದ್ಯತೆ ಹಾಗು ಕನಸಾಗಿದೆ” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News