ಜೈಲಿನೊಳಗೆ ಮಹಿಳೆಯನ್ನು ಅತ್ಯಾಚಾರಗೈದ ಖೈದಿ

Update: 2018-04-28 16:07 GMT

ಗುವಾಹಟಿ, ಎ.28: ವಿಚಾರಣಾಧೀನ ಖೈದಿಯೋರ್ವ ಜೈಲಿನ ಒಳಗೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಅಸ್ಸಾಂನ ಕಾರ್ಬಿ ಅಂಗ್‌ಲಾಂಗ್ ಜಿಲ್ಲೆಯ ದಿಫು ಜೈಲಿನಲ್ಲಿ ನಡೆದಿದೆ.

ಸಂತ್ರಸ್ತ ಮಹಿಳೆ ಆ ಜೈಲಿನಲ್ಲಿ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್‌ನ ಪತ್ನಿ. ಮೂಲಗಳ ಪ್ರಕಾರ, ಕಾನ್‌ಸ್ಟೆಬಲ್ ವಿಚಾರಣಾಧೀನ ಖೈದಿಗೆ ಬಿಸ್ಕೆಟ್ ಪ್ಯಾಕೆಟನ್ನು ಕೊಟ್ಟು ಅದನ್ನು ಜೈಲಿನ ಆವರಣದಲ್ಲಿದ್ದ ತನ್ನ ನಿವಾಸದಲ್ಲಿರುವ ಪತ್ನಿಗೆ ನೀಡುವಂತೆ ತಿಳಿಸಿದ್ದಾನೆ. ಅದರಂತೆ ಕಾನ್‌ಸ್ಟೆಬಲ್ ನಿವಾಸಕ್ಕೆ ತೆರಳಿದ್ದ ಖೈದಿ ಅಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಬಳಿಕ ಪ್ರಕರಣವನ್ನು ಜೈಲರ್‌ನ ಗಮನಕ್ಕೆ ತಂದ ಕಾನ್‌ಸ್ಟೆಬಲ್, ಸಂತ್ರಸ್ತೆಯ ಎದುರು ವಿಚಾರಣಾಧೀನ ಖೈದಿಗಳ ಪರೇಡ್ ನಡೆಸಿದರೆ ಆಕೆ ದುಷ್ಕರ್ಮಿಯನ್ನು ಗುರುತಿಸುವುದಾಗಿ ತಿಳಿಸಿದ್ದರೂ ಜೈಲರ್ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬಳಿಕ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ವರದಿಯಾಗಿದೆ. ಆದರೆ ಇದೊಂದು ವಿಶೇಷ ಘಟನೆಯಾಗಿದೆ. ಅತ್ಯಾಚಾರ ನಡೆದಿರುವುದು ಗರಿಷ್ಠ ಭದ್ರತೆ ಇರುವ ಜೈಲಿನ ಒಳಗಡೆ. ಅಲ್ಲದೆ ಕಂಬಿಗಳ ಹಿಂದೆ ಇರಬೇಕಾದ ಆರೋಪಿಯನ್ನು ಮುಕ್ತವಾಗಿ ತಿರುಗಾಡಲು ಬಿಟ್ಟಿರುವುದೂ ಸರಿಯಲ್ಲ. ಘಟನೆ ಎಪ್ರಿಲ್ 24ರಂದು ನಡೆದಿದ್ದರೂ ಎಪ್ರಿಲ್ 28ರಂದು ದೂರು ದಾಖಲಿಸಿದ್ದು ಈ ವಿಳಂಬದ ಬಗ್ಗೆಯೂ ಪ್ರಶ್ನೆ ಮೂಡುತ್ತಿದೆ. ಜೈಲು ಅಧಿಕಾರಿಗಳು ಕರ್ತವ್ಯ ಲೋಪ ನಡೆಸಿದ್ದಾರೆ ಅಥವಾ ಜೈಲು ಅಧಿಕಾರಿಗಳ ಮೌನಸಮ್ಮತಿಯಿಂದ ಈ ಕೃತ್ಯ ನಡೆದಿರುವ ಸಾಧ್ಯತೆಯಿದೆ. ಆರೋಪಿಯನ್ನು ವಿಚಾರಣೆಗೆ ಗುರಿಪಡಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News