ಇಸ್ರೇಲ್ ಗೋಲಿಬಾರಿಗೆ 4 ಫೆಲೆಸ್ತೀನಿಯರ ಬಲಿ

Update: 2018-04-28 17:15 GMT

ಗಾಝಾ ಸಿಟಿ, ಎ. 28: ಗಾಝಾ ಗಡಿಯಲ್ಲಿ ಶುಕ್ರವಾರ ಇಸೇಲಿ ಪಡೆಗಳೊಂದಿಗೆ ನಡೆದ ಸಂಘರ್ಷದಲ್ಲಿ ಗಾಯಗೊಂಡಿದ್ದ ಫೆಲೆಸ್ತೀನ್ ಬಾಲಕನೋರ್ವ ಶನಿವಾರ ಮೃತಪಟ್ಟಿದ್ದಾರೆ ಎಂದು ಗಾಝಾ ಪಟ್ಟಣದ ಆರೋಗ್ಯ ಸಚಿವಾಲಯ ತಿಳಿಸಿದೆ.

ಶುಕ್ರವಾರ ದಕ್ಷಿಣ ಗಾಝಾದಲ್ಲಿ ನಡೆದ ಪ್ರತಿಭಟನೆಯ ವೇಳೆ 15 ವರ್ಷದ ಬಾಲಕನ ತಲೆಗೆ ಗಾಯವಾಗಿತ್ತು ಎಂದು ಸಚಿವಾಲಯ ಹೇಳಿದೆ.

ಇದರೊಂದಿಗೆ ನಿರಂತರ 5ನೇ ಶುಕ್ರವಾರ ಗಾಝಾ ಗಡಿಯಲ್ಲಿ ಫೆಲೆಸ್ತೀನೀಯರು ನಡೆಸಿದ ಪ್ರತಿಭಟನೆಯ ವೇಳೆ ಇಸ್ರೇಲ್ ಪಡೆಗಳ ಗೋಲಿಬಾರಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ 4ಕ್ಕೇರಿದೆ.

ಕೆಲವು ಪ್ರತಿಭಟನಕಾರರು ಕಲ್ಲು ತೂರಾಟ ಮತ್ತು ಟಯರ್ ಸುಡುವುದರಲ್ಲಿ ತೊಡಗಿರುವುದನ್ನು ಹೊರತುಪಡಿಸಿದರೆ, ಹೆಚ್ಚಿನವರು ಶಾಂತಿಯುತವಾಗಿ ಪ್ರತಿಭಟಿಸಿದರು.

ಮಾರ್ಚ್ 30ರಂದು ‘ಗ್ರೇಟ್ ಮಾರ್ಚ್ ಆಫ್ ರಿಟರ್ನ್’ ಚಳವಳಿ ಫೆಲೆಸ್ತೀನ್‌ನಲ್ಲಿ ಆರಂಭವಾದಂದಿನಿಂದ, ಇಸ್ರೇಲ್ ಪೊಲೀಸರ ಗುಂಡಿಗೆ ಬಲಿಯಾದವರ ಸಂಖ್ಯೆ 45ಕ್ಕೇರಿದಂತಾಗಿದೆ. ಇದೇ ಅವಧಿಯಲ್ಲಿ 1,500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News