ಭಾರತೀಯ ಚಿತ್ರಗಳನ್ನು ನೋಡುವ ಜಿನ್‌ಪಿಂಗ್

Update: 2018-04-28 17:55 GMT

ವುಹಾನ್, ಎ. 28: ಹಿಂದಿ ಮತ್ತು ಪ್ರಾದೇಶಿಕ ಭಾಷೆಯ ಚಿತ್ರಗಳು ಸೇರಿದಂತೆ ಹಲವಾರು ಭಾರತೀಯ ಸಿನೆಮಾಗಳನ್ನು ತಾನು ನೋಡಿದ್ದೇನೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ.

ಅದೇ ವೇಳೆ, ಬಾಲಿವುಡ್ ಚಿತ್ರಗಳು ಚೀನಾಕ್ಕೆ ಬರುವುದು ಹಾಗೂ ಚೀನಾದ ಚಿತ್ರಗಳನ್ನು ಭಾರತದಲ್ಲಿ ಪ್ರದರ್ಶಿಸುವುದು ಒಳ್ಳೆಯ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಚೀನಾದ ನಗರ ವುಹಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಿನ್‌ಪಿಂಗ್ ನಡುವೆ ನಡೆದ ಎರಡು ದಿನಗಳ ಅನೌಪಚಾರಿಕ ಶೃಂಗಸಮ್ಮೇಳನದ ಮುಕ್ತಾಯದ ಬಳಿಕ ಭಾರತೀಯ ವಿದೇಶ ಕಾರ್ಯದರ್ಶಿ ವಿಜಯ ಗೋಖಲೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಆಧ್ಯಾತ್ಮ, ವ್ಯಾಪಾರ, ತಂತ್ರಜ್ಞಾನ, ಸಂಪ್ರದಾಯ ಮತ್ತು ಮನರಂಜನೆ ಮುಂತಾದ ಕ್ಷೇತ್ರಗಳಲ್ಲಿ ಸಹಯೋಗದ ಪ್ರಸ್ತಾಪವನ್ನು ಉಭಯ ನಾಯಕರು ಮುಂದಿಟ್ಟರು ಎಂದು ಗೋಖಲೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News