ಕವೀಂದರ್ ಗುಪ್ತಾ ಜಮ್ಮು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ

Update: 2018-04-30 08:40 GMT

ಶ್ರೀನಗರ, ಎ.30: ಜಮ್ಮು ಮತ್ತು ಕಾಶ್ಮೀರದ ಉಪಮುಖ್ಯ ಮಂತ್ರಿಯಾಗಿ ಕವೀಂದರ್ ಗುಪ್ತಾ ಇಂದು ಪ್ರಮಾಣವಚನ ಸ್ವೀಕರಿಸಿ, ಅಧಿಕಾರ ವಹಿಸಿಕೊಂಡರು.

ಪಿಡಿಪಿ-ಬಿಜೆಪಿ ಸರಕಾರದಲ್ಲಿ ಉಪ ಮುಖ್ಯ ಮಂತ್ರಿಯಾಗಿದ್ದ ನಿರ್ಮಲ್ ಸಿಂಗ್ ಅವರು ರಾಜೀನಾಮೆಯಿಂದಾಗಿ ತೆರವಾಗಿದ್ದ ಉಪಮುಖ್ಯ ಮಂತ್ರಿ ಸ್ಥಾನಕ್ಕೆ ಕವೀಂದರ್ ಗುಪ್ತಾ ಆಯ್ಕೆ ನೇಮಕಗೊಂಡಿದ್ದರು. ಕವೀಂದರ್ ಅವರು ಈ ಮೊದಲು ವಿಧಾನ ಸಭೆಯ ಸ್ವೀಕರ್ ಆಗಿದ್ದರು.

ಕವಿಂದರ್ ಗುಪ್ತಾ ಜೊತೆ  ಏಳು ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News