ನಿಮಗೆ ಸಾಧ್ಯವಿದ್ದರೆ ಯಡಿಯೂರಪ್ಪ ಸಾಧನೆ ಬಗ್ಗೆ ಪೇಪರ್ ನೋಡಿಕೊಂಡೇ 15 ನಿಮಿಷ ಮಾತನಾಡಿ

Update: 2018-05-02 09:46 GMT

ಬೆಂಗಳೂರು, ಮೇ 2: ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಪ್ರಧಾನಿ ಮೋದಿ ಮತ್ತು ಸಿದ್ದರಾಮಯ್ಯ ನಡುವಿನ ಟ್ವಿಟರ್ ಸಮರವೂ ಜೋರಾಗಿದೆ. ನಿನ್ನೆ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, “ರಾಹುಲ್ ಗೆ ಸಾಧ್ಯವಿದ್ದರೆ ಸಿದ್ದರಾಮಯ್ಯ ಸಾಧನೆಯ ಬಗ್ಗೆ ಯಾವುದೇ ಪೇಪರ್ ನೋಡದೆ 15 ನಿಮಿಷಗಳ ಕಾಲ ಮಾತನಾಡಲಿ, ಅದು ಹಿಂದಿ, ಇಂಗ್ಲಿಷ್ ಅಥವಾ ನಿಮ್ಮ ಮಾತೃಭಾಷೆಯಾದರೂ ಸರಿ” ಎಂದು ಹೇಳಿದ್ದರು.

ಮೋದಿಯ ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, “ಪ್ರೀತಿಯ ನರೇಂದ್ರ ಮೋದಿ ಜಿ, ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಸರಕಾರದ ಸಾಧನೆಯ ಬಗ್ಗೆ ಪೇಪರ್ ನೋಡಿಕೊಂಡೇ 15 ನಿಮಿಷಗಳ ಕಾಲ ಮಾತನಾಡಿ” ಎಂದು ಸವಾಲೆಸೆದಿದ್ದಾರೆ.

ನಿನ್ನೆ ಕೂಡ ಸಿದ್ದರಾಮಯ್ಯ ಅವರು 2+1 ಫಾರ್ಮುಲಾ ಬಳಸುತ್ತಿದ್ದಾರೆ ಎಂಬ ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ದ ಸಿದ್ದರಾಮಯ್ಯ 2+1 ಎಂದರೆ 2 ರೆಡ್ಡಿ 1 ಯಡ್ಡಿ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News