ಕೆನಡದಲ್ಲಿರುವ ಭಾರತೀಯ ಪ್ರವಾಸೋದ್ಯಮ ಕಚೇರಿ ಬಂದ್

Update: 2018-05-02 16:47 GMT

ಟೊರಾಂಟೊ (ಕೆನಡ), ಮೇ 2: ಕೆನಡ ಮತ್ತು ಭಾರತದ ನಡುವೆ ಸುಮಾರು 58 ವರ್ಷಗಳಿಂದ ಸೇತುವೆಯಾಗಿದ್ದ ಟೊರಾಂಟೊ ನಗರದಲ್ಲಿರುವ ಭಾರತೀಯ ಪ್ರವಾಸೋದ್ಯಮ ಕಚೇರಿಯನ್ನು ಮಾರ್ಚ್ ಕೊನೆಯ ವೇಳೆಗೆ ಮುಚ್ಚಲಾಗಿದೆ.

ಕಚೇರಿಯ ಉದ್ಯೋಗಿಗಳಿಗೆ ಮಾರ್ಚ್ ತಿಂಗಳ ಮಧ್ಯ ಭಾಗದಲ್ಲಿ ಅನಿರೀಕ್ಷಿತ ಸೂಚನೆ ಸರಕಾರದಿಂದ ಬಂದಿತ್ತು.

ಪ್ರವಾಸೋದ್ಯಮ ಸಚಿವಾಲಯದ ಸೂಚನೆಯಂತೆ, ಭಾರತವನ್ನು ಕೆನಡಿಯನ್ನರ ಪ್ರವಾಸ ತಾಣ ಎಂಬುದಾಗಿ ಬಿಂಬಿಸುವುದು ಸೇರಿದಂತೆ, ಕಚೇರಿಯ ಎಲ್ಲ ಕೆಲಸಗಳನ್ನು ಈಗ ಮುಕ್ತಾಯಗೊಳಿಸಲಾಗಿದೆ.

ಎಪ್ರಿಲ್ ಕೊನೆಯ ವೇಳೆಗೆ ಕಚೇರಿಯ ತುಂಬಾ ಪ್ಯಾಕಿಂಗ್ ಬಾಕ್ಸ್‌ಗಳನ್ನು ರಾಶಿ ಹಾಕಲಾಗಿತ್ತು. ಟೊರಾಂಟೊದಲ್ಲಿ ಪ್ರದರ್ಶನಕ್ಕಿಡಲಾಗಿದ್ದ ಕಲಾಕೃತಿಗಳನ್ನು ವಾಪಸ್ ಭಾರತಕ್ಕೆ ಕಳುಹಿಸುವುದಕ್ಕಾಗಿ ಕಚೇರಿಯಲ್ಲಿ ರಾಶಿ ಹಾಕಲಾಗಿದೆ.

ಈ ಕಚೇರಿಯು 1960ರಿಂದಲು ಕೆನಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಉಭಯ ರಾಷ್ಟ್ರಗಳ ನಡುವಿನ ಪ್ರಯಾಣ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು.

2011ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಕೆನಡಿಯನ್ನರ ಸಂಖ್ಯೆ 2,59,017 ಆಗಿತ್ತು ಹಾಗೂ 2017ರಲ್ಲಿ ಈ ಸಂಖ್ಯೆ 3,38,925ಕ್ಕೆ ಏರಿದೆ. ಅದೇ ವೇಳೆ, ಇದೇ ಅವಧಿಯಲ್ಲಿ ಕೆನಡಕ್ಕೆ ಪ್ರಯಾಣಿಸಿದ ಭಾರತೀಯರ ಸಂಖ್ಯೆ 1,39,213ರಿಂದ 1,90,565ಕ್ಕೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News