ದಲಿತರ ಮನೆಯಲ್ಲಿ ಊಟ ಮಾಡುವ ನಾಟಕ ನಿಲ್ಲಿಸಿ: ಬಿಜೆಪಿಗೆ ಆರೆಸ್ಸೆಸ್ ತಾಕೀತು

Update: 2018-05-04 07:10 GMT

 ಹೊಸದಿಲ್ಲಿ, ಮೆ 4: ದಲಿತ ಕುಟುಂಬದ ಜೊತೆಗೆ ಊಟ ಮಾಡುವ ಮೂಲಕ ದಲಿತರನ್ನು ಒಲಿಸಿಕೊಳ್ಳುವ ಬಿಜೆಪಿ ಯತ್ನವನ್ನು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಟೀಕಿಸಿದ್ದಾರೆ.

ದಲಿತರ ಮನೆಯಲ್ಲಿ ಊಟ ಮಾಡಿ ಮಾಧ್ಯಮದವರನ್ನು ಅಲ್ಲಿಗೆ ಕರೆತಂದು ಪ್ರಚಾರ ಪಡೆಯುವ ನಾಟಕವನ್ನು ನಿಲ್ಲಿಸಬೇಕಾಗಿದೆ. ಅದರ ಬದಲಿಗೆ ನಿರಂತರವಾಗಿ ದಲಿತ ನಾಯಕರನ್ನು ಭೇಟಿಯಾಗಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸಬೇಕು. ದಲಿತ ಕುಟುಂಬದವರನ್ನು ನಮ್ಮ ಮನೆಗೆ ಆಹ್ವಾನಿಸಬೇಕು. ಜಾತಿ ವ್ಯವಸ್ಥೆಯಿಂದ ಹೊರ ಬರಲು ಸಹಾಯ ಮಾಡಬೇಕೆಂದು ಭಾಗವತ್ ಸಲಹೆ ನೀಡಿದ್ದಾರೆ.

ಸಾಮಾಜಿಕ ಸಾಮರಸ್ಯವನ್ನು ಹೆಚ್ಚಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯ ಅಂಗವಾಗಿ ಕಳೆದ ಕೆಲವು ವಾರಗಳಿಂದ ಬಿಜೆಪಿಯ ಸಚಿವರುಗಳು ಹಳ್ಳಿಗೆ ತೆರಳಿ ದಲಿತರ ಮನೆಯಲ್ಲಿ ಊಟ ಮಾಡಲಾರಂಭಿಸಿದ್ದಾರೆ.

ಇತ್ತೀಚೆಗೆ ಉತ್ತರಪ್ರದೇಶದ ಸಚಿವ ಸುರೇಶ್ ರಾಣಾ ಅವರು ತನ್ನ ಮನೆಯಿಂದ ಊಟ ತರಿಸಿ ದಲಿತರ ಮನೆಯಲ್ಲಿ ಊಟ ಮಾಡಿದ್ದರು. ಈ ಘಟನೆಯು ಭಾರೀ ವಿವಾದ ಹುಟ್ಟುಹಾಕಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News