ಹಳೆಯ ಬಸ್‌ಪಾಸ್‌ಗಳ ಅವಧಿ ವಿಸ್ತರಣೆ

Update: 2018-05-05 16:23 GMT

ಬೆಂಗಳೂರು, ಮೇ 5: ಪ್ರಸಕ್ತ ಸಾಲಿನ ಒಂದು ತಿಂಗಳು ಮುಂಚಿತವಾಗಿಯೇ ಅಂದರೆ ಮೇ 2ರಿಂದ ದ್ವಿತೀಯ ಪಿಯು ಆರಂಭವಾಗಿರುವ ಹಿನ್ನೆಲೆಯಲ್ಲಿ ಹಾಲಿ ಇರುವ ಹಳೆಯ ಬಸ್‌ಪಾಸ್‌ಗಳ ಅವಧಿ ವಿಸ್ತರಣೆ ಮಾಡಲಾಗಿದೆ.

2017-18ನೇ ಸಾಲಿನಲ್ಲಿ ಪ್ರಥಮ ಪಿಯುಸಿ ವೇಳೆ ಪಾಸ್ ಪಡೆದಿರುವ ವಿದ್ಯಾರ್ಥಿಗಳು, ಈ ಸಾಲಿನ ಪಾಸ್ ವಿತರಿಸುವವರೆಗೂ ಹಳೆಯ ಪಾಸಿನಲ್ಲಿ ನಮೂದಿಸಿರುವ ಮಾರ್ಗದಲ್ಲಿ ಉಚಿತವಾಗಿ ಪ್ರಯಾಣಿಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ಅವಕಾಶ ಕಲ್ಪಿಸಿದೆ.

ಒಂದು ತಿಂಗಳ ಮುಂಚಿತವಾಗಿ ಅಂದರೆ ಮೇ 2 ರಿಂದಲೇ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯು ತರಗತಿಗಳನ್ನು ಪ್ರಾರಂಭಿಸಿದ್ದು, ಇದರಿಂದ ಕೆಎಸ್ಸಾರ್ಟಿಸಿನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಲಿದೆ. ಇದೇ ಕಾರಣಕ್ಕೆ ಕೆಎಸ್ಸಾರ್ಟಿಸಿ ನೂತನ ಬಸ್‌ಪಾಸ್‌ಗಳು ವಿತರಿಸುವವರೆಗೂ ಹಳೆಯ ಪಾಸ್‌ಗಳನ್ನೇ ಬಳಕೆ ಮಾಡಲು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದೆ. ಅದರಂತೆ ಹಳೆಯ ಬಸ್‌ಪಾಸ್‌ಗಳನ್ನೆ ಇನ್ನೂ ಒಂದು ತಿಂಗಳ ಕಾಲ ಬಳಸಬಹುದಾಗಿದೆ.

ಈ ಬಗ್ಗೆ ಬಿಎಂಟಿಸಿ, ವಾಯವ್ಯ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳು ಮಾಹಿತಿ ನೀಡಿದ್ದು, ಈ ಸಂಸ್ಥೆಗಳ ವ್ಯಾಪ್ತಿಯ ವಿದ್ಯಾರ್ಥಿಗಳಿಗೂ ಇದು ಅನ್ವಯವಾಗಲಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News