ಮುಂದಿನ ಮೂರು ವರ್ಷಗಳಲ್ಲಿ 2.82 ಲಕ್ಷ ಸೇವಾ ಕೇಂದ್ರಗಳ ಸ್ಥಾಪನೆ: ಐಆರ್‌ಸಿಟಿಸಿ

Update: 2018-05-07 12:34 GMT

ಹೊಸದಿಲ್ಲಿ, ಮೇ.7: ಮುಂದಿನ ಮೂರು ವರ್ಷಗಳಲ್ಲಿ 2.82 ಲಕ್ಷ ಸೇವಾ ಕೇಂದ್ರಗಳನ್ನು ತೆರೆಯುವ ಮೂಲಕ ಪ್ರಯಾಣಿಕರಿಗೆ ಇ-ಟಿಕೆಟಿಂಗ್ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಭಾರತೀಯ ರೈ ಲ್ವೇ ಆಹಾರ ಮತ್ತು ಪ್ರವಾಸೋದ್ಯಮ ಪ್ರಾಧಿಕಾರ (ಐಆರ್‌ಸಿಟಿಸಿ) ಸೋಮವಾರ ತಿಳಿಸಿದೆ. ಸದ್ಯ ಪ್ರಾಧಿಕಾರವು ಕೇವಲ 38,500 ಸೇವಾ ಪೂರೈಕೆದಾರರನ್ನು ನೋಂದಣಿ ಮಾಡಿದೆ ಎಂದು ಅದು ತಿಳಿಸಿದೆ.

ಐಆರ್‌ಸಿಟಿಸಿಯಲ್ಲಿ ಪ್ರತಿದಿನ ಸುಮಾರು 200-300 ಸೇವಾ ಪೂರೈಕೆದಾರರು ನೋಂದಣಿ ಮಾಡಿಕೊಳ್ಳುತ್ತಿರುವುದರಿಂದ 2.82 ಲಕ್ಷದ ಗುರಿಯನ್ನು ಸಾಧಿಸುವುದು ಕಷ್ಟ ಎಂದು ಮೂಲಗಳು ತಿಳಿಸಿವೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಮಂದಿ ಡಿಜಿಟಲ್ ಪಾವತಿ ವಿಧಾನವನ್ನು ಅನುಸರಿಸುವಂತೆ ಮಾಡಲು ಸರಕಾರವು ಸಾಮಾನ್ಯ ಸೇವಾ ಕೇಂದ್ರ (ಸಿಎಸ್ಸಿ)ಯನ್ನು ಆರಂಭಿಸಿದೆ. ಗ್ರಾಮೀಣ ಭಾಗಗಳಲ್ಲಿ ಆರಂಭಿಸಲಾಗಿರುವ ಈ ಸಿಎಸ್ಸಿಗಳು ಅಥವಾ ಡಿಜಿಟಲ್ ಸೇವಾ ಕೇಂದ್ರಗಳು ಆ ಭಾಗದ ಜನರಿಗೆ, ಆನ್‌ಲೈನ್ ಟಿಕೆಟ್ ಬುಕಿಂಗ್, ಆಧಾರ್ ನೋಂದಣಿ, ಪ್ರಮಾಣಪತ್ರಗಳ ಮುದ್ರಣ ಹಾಗೂ ಇತರ ವಿದ್ಯುನ್ಮಾನ ಸೇವೆಗಳನ್ನು ಒದಗಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News