ಅಪಹರಿಸಲ್ಪಟ್ಟ ಭಾರತೀಯ ಇಂಜಿನಿಯರ್‌ಗಳ ಪತ್ತೆಗೆ ಬುಡಕಟ್ಟು ನಾಯಕರ ಬಳಕೆ

Update: 2018-05-07 16:23 GMT

ಕಾಬೂಲ್, ಮೇ 7: ಅಫ್ಘಾನಿಸ್ತಾನದ ಬಾಗ್ಲನ್ ಪ್ರಾಂತದಲ್ಲಿ ತಾಲಿಬಾನ್ ಬಂದೂಕುಧಾರಿಗಳು ಅಪಹರಿಸಿರುವ 7 ಭಾರತೀಯ ಇಂಜಿನಿಯರ್‌ಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಭದ್ರತಾ ಅಧಿಕಾರಿಗಳು ಸ್ಥಳೀಯ ಬುಡಕಟ್ಟು ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮಾಧ್ಯಮ ವರದಿಗಳು ಸೋಮವಾರ ಹೇಳಿವೆ.

ಆರ್‌ಪಿಜಿ ಗ್ರೂಪ್‌ನ ಕಂಪೆನಿಯಾಗಿರುವ ಕೆಇಸಿ ಇಂಟರ್‌ನ್ಯಾಶನಲ್‌ನ ಭಾರತೀಯ ಇಂಜಿನಿಯರ್‌ಗಳು ವಿದ್ಯುತ್ ಉಪ ಸ್ಥಾವರವೊಂದರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು.

ಅವರು ರವಿವಾರ ಕಾಮಗಾರಿ ವೀಕ್ಷಣೆಗೆ ಹೋಗುತ್ತಿದ್ದಾಗ ಚೆಶ್ಮೆ ಶೇರ್ ಪ್ರದೇಶದಿಂದ ಭಯೋತ್ಪಾದಕರು ಅವರನ್ನು ಅಪಹರಿಸಿದ್ದರು.

 ಭಾರತೀಯ ಇಂಜಿನಿಯರ್‌ಗಳ ಬಿಡುಗಡೆಗಾಗಿ ಅಫ್ಘಾನ್ ಪಡೆಗಳು, ಸರಕಾರಿ ಅಧಿಕಾರಿಗಳು ಮತ್ತು ಸ್ಥಳೀಯ ಬುಡಕಟ್ಟು ಹಿರಿಯರು ಪ್ರಯತ್ನಿಸುತ್ತಿದ್ದಾರೆ ಎಂದು ಬಾಗ್ಲನ್ ಪ್ರಾಂತದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News