ವಿಜಯ ಬ್ಯಾಂಕ್‌ಗೆ 727 ಕೋಟಿ ನಿವ್ವಳ ಲಾಭ: ವ್ಯವಸ್ಥಾಪಕ ನಿರ್ದೇಶಕ ಶಂಕರನಾರಾಯಣ್

Update: 2018-05-07 16:34 GMT

ಬೆಂಗಳೂರು, ಮೇ 7: ಪ್ರಸ್ತುತ ವರ್ಷದ ಆರ್ಥಿಕ ಸಾಲಿನಲ್ಲಿ ವಿಜಯ ಬ್ಯಾಂಕ್ 727 ಕೋಟಿ ರೂ.ಗಳ ನಿವ್ವಳ ಲಾಭಗಳಿಸಿದೆ ಎಂದು ವಿಜಯ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಶಂಕರನಾರಾಯಣ್ ಹೇಳಿದ್ದಾರೆ.

ಸೋಮವಾರ ಎಂಜಿ ರಸ್ತೆಯಲ್ಲಿರುವ ವಿಜಯ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂರನೆ ತ್ರೈಮಾಸಿಕದಲ್ಲಿ 80 ಕೋಟಿ ಇದ್ದ ನಿವ್ವಳ ಲಾಭ ಮಾರ್ಚ್ ತಿಂಗಳಿಗೆ ಕೊನೆಗೊಂಡಂತೆ ನಾಲ್ಕನೆಯ ತ್ರೈಮಾಸಿಕದಲ್ಲಿ ಬ್ಯಾಂಕ್ 207 ಕೋಟಿ ಗಳಿಸುವ ಮೂಲಕ ಲಾಭದಲ್ಲಿ ಏರಿಕೆ ಕಂಡುಕೊಂಡಿದೆ, ಆ ಮೂಲಕ ಒಟ್ಟಾರೆ ಲಾಭದ ಪ್ರಮಾಣ 727 ಕೋಟಿಗೆ ತಲುಪಿದೆ, ಶೇ.12 ರಷ್ಟು ಡಿವಿಡೆಂಟ್ ಅನ್ನು ಷೇರುದಾರರಿಗೆ ನೀಡಲು ಚಿಂತನೆ ನಡೆಸಿದ್ದು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಲ್ಳಲಾಗುತ್ತದೆ ಎಂದು ತಿಳಿಸಿದರು.

ನಾಲ್ಕನೆಯ ತ್ರೈಮಾಸಿಕದಲ್ಲಿ ಬಡ್ಡಿಯಿಂದ ಬರುವ ಆದಾಯ ಶೇ.22.73ರಂತೆ 4303 ಕೋಟಿ, ನಿಮ್ ಪ್ರಮಾಣ ಶೇ.2.77 ರಿಂದ ಶೇ.3.10ಗೆ ಹೆಚ್ಚಳ, ರಿಟೈಲ್ ಸಾಲದ ಪ್ರಮಾಣ ಶೇ.24.98, ವಸತಿಸಾಲ ವಿಭಾಗದಲ್ಲಿ ಶೇ.30.50, ಒಟ್ಟಾರೆ ಆದಾಯ ರಹಿತ ಸ್ವತ್ತಿನ ಪ್ರಮಾಣ ಶೇ.4.36 ರಿಂದ ಶೇ.4.32 ಗೆ ಇಳಿಕೆಯಾದ ಪರಿಣಾಮ ಲಾಭ 207 ಕೋಟಿಗೆ ತಲುಪಿದೆ. ಕಳೆದ ಸಾಲಿನ ಕೊನೆಯ ತ್ರೈಮಾಸಿಕಕ್ಕೆ ಹೋಲಿಸಿದರೆ ನಾಲ್ಕು ಕೋಟಿ ಹೆಚ್ಚು ಲಾಭಗಳಿಸಿದೆ ಎಂದರು.

ವಿಜಯ ಬ್ಯಾಂಕ್‌ನಲ್ಲಿ 40 ಎನ್‌ಪಿಎ ಅಡಿ 40 ಖಾತೆಗಳಿವೆ/ ಅದರಲ್ಲಿ 10 ಖಾತೆಗಳು ದೊಡ್ಡ ಕಂಪೆನಿಗಳಿಗೆ ಸೇರಿವೆ, ಅವುಗಳ ಹೆಸರು ಬಹಿರಂಗೊಳಿಸುವಂತಿಲ್ಲ, ಆರ್‌ಬಿಐ ಸೂಚನೆಯಂತೆ ನಾವು ಮುಂದುವರೆಯುತ್ತೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News