ಕೇರಳದಲ್ಲಿ 'ನಿಪಾ' ವೈರಾಣು ಸೋಂಕಿಗೆ ಬಲಿಯಾದವರ ಸಂಖ್ಯೆ 16ಕ್ಕೆ ಏರಿಕೆ

Update: 2018-05-21 08:35 GMT

ಕಲ್ಲಿಕೋಟೆ ,ಮೇ 21: ಕೇರಳದಲ್ಲಿ ಕಂಡು ಬಂದಿರುವ ನಿಗೂಡ ವೈರಾಣು ಸೋಂಕಿಗೆ ಕಳೆದ ಎರಡು ವಾರಗಳಲ್ಲಿ  ಬಲಿಯಾದವರ ಸಂಖ್ಯೆ 16ಕ್ಕೇರಿದೆ. ಕೊಝಿಕ್ಕೋಡ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಗೂಢ ವೈರಾಣು ಸೋಂಕಿಗೆ ತುತ್ತಾದವರಿಗೆ ಉಪಚರಿಸುತ್ತಿದ್ದ  ದಾದಿಯೊಬ್ಬರು ಮೃತಪಟ್ಟಿದ್ದಾರೆ.

ಕೋಝಿಕ್ಕೋಡ್ ನ ಆಸ್ಪತ್ರೆಯಲ್ಲಿ ಪೆರಂಬ್ರಾದ ಒಂದೇ ಕುಟುಂಬದ ಮೂವರು ಎನ್‌ಸಿಫಾಲಿಟಿಸ್‌-ಇನ್‌ಡ್ಯೂಸಡ್‌ ಮಯೋಕಾರ್ಡಿಟಿಸ್‌ (ಎನ್‌ಇಎಂ) ಸೋಂಕಿಗೆ ಬಲಿಯಾಗಿದ್ದಾರೆ. ಇವರನ್ನು ಉಪಚರಿಸುತ್ತಿದ್ದ 31ರ ಹರೆಯದ ದಾದಿಯೊಬ್ಬರಿಗೆ ಸೋಂಕು ತಗಲಿದ್ದು, ಇವರು  ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ. ಇವರು ಪೆರಂಬ್ರಾ ತಾಲೂಕು ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದು ಬಂದಿದೆ.

ನಿಗೂಢ ನಿಪಾ ವೈರಸ್ ಸೋಂಕಿಗೆ ಕೋಝಿಕ್ಕೊಡ್ ನ ಇಬ್ಬರು, ಮಲಪ್ಪುರಂ ಜಿಲ್ಲೆಯ ನಾಲ್ವರು ಸಾವಿಗೀಡಾಗಿದ್ದಾರೆ. ಮಲಪ್ಪುರಂನಲ್ಲಿ ಸೋಂಕು ತಗಲಿದವರ  ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದ್ದು ಅವುಗಳನ್ನು ಪರೀಕ್ಷೆಗಾಗಿ  ಮಣಿಪಾಲದ ಕೆಎಂಸಿಗೆ ಕಳುಹಿಸಲಾಗಿದೆ ಎಂದು ಮಲಪ್ಪುರಂನ ಜಿಲ್ಲಾ ವೈದ್ಯಾಧಿಕಾರಿ ಡಾ. ಕೆ. ಸಕೀನ ತಿಳಿಸಿದ್ದಾರೆ.

ಒಟ್ಟು 25 ಮಂದಿ ಈ ಸೋಂಕಿನಿಂದ ಬಳಲುತ್ತಿದ್ದಾರೆ . ಇವರೆಲ್ಲಾ ಈ ಪೈಕಿ 5 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಸೋಂಕು ಕಾಣಿಸಿಕೊಂಡಿರುವ ಪ್ರದೇಶಗಳಿಗೆ ಕೇಂದ್ರದ ತಜ್ಞ ವೈದ್ಯರ ತಂಡ ಸೋಮವಾರ  ಭೇಟಿ ನೀಡಿದೆ.

 ವೈರಸ್‌ ತಗುಲಿದವರ ರಕ್ತದ ಮಾದರಿಗಳನ್ನು  ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್‌ ವೈರಾಲಜಿಗೆ ಕಳುಹಿಸಿಕೊಡಲಾಗಿದೆ.ಎಂದು  ಆರೋಗ್ಯ ಖಾತೆ ಸಚಿವೆ ಕೆ.ಕೆ.ಶೈಲಜಾ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News