ಎಸೆಸೆಲ್ಸಿ ಪೂರಕ ಪರೀಕ್ಷಾ ಶುಲ್ಕ ಪಾವತಿ ದಿನಾಂಕ ವಿಸ್ತರಣೆ

Update: 2018-05-21 16:12 GMT

ಬೆಂಗಳೂರು, ಮೇ 21: ಜೂನ್‌ನಲ್ಲಿ ನಡೆಯಲಿರುವ ಎಸೆಸೆಲ್ಸಿಯ ಪೂರಕ ಪರೀಕ್ಷೆಗೆ ಪರೀಕ್ಷಾ ಶುಲ್ಕ ಪಾವತಿಸಲು ಹಾಗೂ ನಾಮಿನಲ್ ರೋಲ್ ಪ್ರಸ್ತಾವನೆಗಳನ್ನು ಸಲ್ಲಿಸಲು ನಿಗದಿ ಮಾಡಿದ್ದ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

ಪುನರಾವರ್ತಿತ ಅಭ್ಯರ್ಥಿಗಳಿಂದ ಪರೀಕ್ಷಾ ಶುಲ್ಕ ಸ್ವೀಕರಿಸಿ ಬ್ಯಾಂಕಿಗೆ ಎನ್‌ಇಎಫ್‌ಟಿ ಚಲನ್ ಮೂಲಕ ಜಮೆ ಮಾಡುವ ಕೊನೆ ದಿನಾಂಕವನ್ನು ಮೇ 23 ರವರೆಗೂ ಅವಕಾಶ ನೀಡಿದ್ದು, ನಾಮಿನಲ್ ರೋಲ್ ಪ್ರಸ್ತಾವನೆ ಹಾಗೂ ಬ್ಯಾಂಕ್ ಚಲನ್ ಮೂಲ ಪ್ರತಿ ಶಾಲೆಗಳಿಂದ ಮಂಡಳಿಗೆ ತಲುಪಿಸಲು ಮೇ 24 ಕೊನೆ ದಿನಾಂಕವಾಗಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಪ್ರಕಟನೆ ತಿಳಿಸಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News