ಬಜರಂಗದಳ ಕಾರ್ಯಕರ್ತರಿಗೆ ಬಂದೂಕು, ಮಾರಕಾಸ್ತ್ರಗಳ ಬಳಕೆ ಬಗ್ಗೆ ರಹಸ್ಯ ತರಬೇತಿ

Update: 2018-05-27 07:15 GMT

ರಾಜ್ ಗರ್, ಮೇ 27: ಹಿಂದೂಗಳ ರಕ್ಷಣೆಯ ಹೆಸರಿನಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ಬಂದೂಕು ಹಾಗು ಇತರ ಮಾರಕಾಸ್ತ್ರಗಳ ಬಳಕೆಯ ಬಗ್ಗೆ ತರಬೇತಿ ನೀಡಿರುವ ಘಟನೆ ಮಧ್ಯಪ್ರದೇಶದ ರಾಜ್ ಗರ್ ಜಿಲ್ಲೆಯಲ್ಲಿ ನಡೆದಿದೆ.

ಮೇ 3ರಿಂದ 11ರವರೆಗೆ ಈ ಶಿಬಿರ ನಡೆದಿದ್ದು, ಈ ಆತಂಕಕಾರಿ ಬೆಳವಣಿಗೆ ತಡವಾಗಿ ಬೆಳಕಿಗೆ ಬಂದಿದೆ. 32 ಜಿಲ್ಲೆಗಳಿಂದ ಆಯ್ಕೆ ಮಾಡಿದ ಸದಸ್ಯರಿಗೆ ರೈಫಲ್ ಗಳು, ಕತ್ತಿಗಳು ಹಾಗು ಲಾಠಿಗಳ ಬಳಕೆ ಬಗ್ಗೆ ಶಿಬಿರದಲ್ಲಿ ತರಬೇತಿ ನೀಡಲಾಗಿದೆ ಎಂದು ವರದಿಯಾಗಿದೆ.

ಶಿಬಿರದ ಫೋಟೊಗಳು ಸೋರಿಕೆಯಾಗಿದ್ದ ನಂತರವೇ ಈ ಶಿಬಿರದ ಬಗ್ಗೆ ಹೊರಜಗತ್ತಿಗೆ ಗೊತ್ತಾಗಿತ್ತು. “ದೇಶ ವಿರೋಧಿಗಳು, ಲವ್ ಜಿಹಾದಿ ಶಕ್ತಿಗಳನ್ನು ಮಟ್ಟಹಾಕಲು ನಾವು ನಡೆಸುವ ನಿಯಮಿತ ಶಿಬಿರ ಇದಾಗಿದೆ” ಎಂದು ಬಜರಂಗದಳದ ಜಿಲ್ಲಾ ಕನ್ವೀನರ್ ದೇವಿ ಸಿಂಗ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶ ಬಿಜೆಪಿ ವಕ್ತಾರ ರಜನೀಶ್ ಅಗರ್ವಾಲ್, “ದೇಶದಲ್ಲಿ ಕಾನೂನು ಹಾಗು ಸಂವಿಧಾನವಿದೆ. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ಸರಕಾರವು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ” ಎಂದಿದ್ದಾರೆ.

ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News