ಇವಿಎಂಗಳಲ್ಲಿ ದೋಷ: ಮಹಾರಾಷ್ಟ್ರದ ಭಂಡಾರ-ಗೊಂಡಿಯಾದ 35 ಬೂತ್ ಗಳಲ್ಲಿ ಮತದಾನ ಸ್ಥಗಿತ

Update: 2018-05-28 09:17 GMT

ಮಹಾರಾಷ್ಟ್ರ, ಮೇ 28: ಇವಿಎಂಗಳಲ್ಲಿ ದೋಷ ಕಾಣಿಸಿಕೊಂಡ ಕಾರಣ ಮಹಾರಾಷ್ಟ್ರದ ಭಂಡಾರ-ಗೊಂಡಿಯಾದ 35 ಬೂತ್ ಗಳಲ್ಲಿ ಮತದಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ.

“ಈ ಬೂತ್ ಗಳಲ್ಲಿ ಇವಿಎಂ ದೋಷ ಕಾಣಿಸಿಕೊಂಡಿದೆ. ಇಲ್ಲಿ ಮತದಾನಕ್ಕೆ ತಡೆ ನೀಡಲಾಗಿದೆ’ ಎಂದು ಗೊಂಡಿಯಾ ಸಬ್ ಡಿವಿಶನಲ್ ಅಧಿಕಾರಿ ಅನಂತ್ ವಾಲಸ್ಕರ್ ಮಾಹಿತಿ ನೀಡಿದ್ದಾರೆ.

ಇಲ್ಲಿ ಇವಿಎಂಗಳನ್ನು ತಿರುಚಲಾಗಿದೆ ಎಂದು ಎನ್ ಸಿಪಿ ನಾಯಕ ಪ್ರಫುಲ್ ಪಟೇಲ್ ಆರೋಪಿಸಿದ್ದಾರೆ. “ಯುರೋಪಿಯನ್ ದೇಶಗಳಲ್ಲಿ ಇವಿಎಂಗಳನ್ನು ಚುನಾವಣಾ ಆಯೋಗ ನಿರಾಕರಿಸಿದೆ. ಎಸ್ಪಿ ನಾಯಕ ಅಖಿಲೇಶ್ ಯಾದವ್ ಈಗಷ್ಟೇ ಕರೆ ಮಾಡಿದ್ದರು. ಕೈರಾನದಲ್ಲೂ 300 ಇವಿಎಂಗಳಲ್ಲಿ ದೋಷ ಕಾಣಿಸಿಕೊಂಡಿದೆ. ಇಲ್ಲಿ ಮರುಮತದಾನ ನಡೆಯಬೇಕು” ಎಂದವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News