ಆರ್.ಆರ್. ನಗರದಲ್ಲಿ 54 ಶೇ. ಮತದಾನ

Update: 2018-05-29 04:36 GMT

ಬೆಂಗಳೂರು, ಮೇ 29: ರಾಜರಾಜೇಶ್ವರಿ(ಆರ್‌ಆರ್ ನಗರ) ನಗರ ವಿಧಾನಸಭಾ ಕ್ಷೇತ್ರಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ. 54 ಮತದಾನವಾಗಿದೆ.

ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಬಳಿಕ ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿ ಪತ್ತೆಯಾದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿತ್ತು.

ನಿನ್ನೆ ನಡೆದ ಚುನಾವಣೆಯಲ್ಲಿ ಆರ್‌ಆರ್ ವಿಧಾನಸಭಾ ಕ್ಷೇತ್ರದ ಒಟ್ಟು 421 ಮತಗಟ್ಟೆಗಳ ವ್ಯಾಪ್ತಿಯ ಒಟ್ಟು 4,72,067 ಮತದಾರರ ಪೈಕಿ 2,55842 (ಶೇ.54) ಮಂದಿ ಮಾತ್ರ ಹಕ್ಕು ಚಲಾಯಿಸಿದ್ದಾರೆ. 2,46,715 ಪುರುಷ ಮತದಾರರ ಪೈಕಿ 1,30,969 ಮಂದಿ (53.09 ಶೇ.), 2,25,274 ಮಹಿಳಾ ಮತದಾರರ ಪೈಕಿ 1,24,862 ಮಂದಿ (55.92 ಶೇ.) ಹಾಗೂ 78 ಇತರ ಮತದಾರರ ಪೈಕಿ 21 ಮಂದಿ (26.92 ಶೇ.) ಮತ ಚಲಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News