ಅಫ್ಘಾನಿಸ್ತಾನದಲ್ಲಿ ಕಾರ್ ಬಾಂಬ್ ದಾಳಿಗೆ ಮೂರು ಪೊಲೀಸರು ಬಲಿ: ತಾಲಿಬಾನ್ ಕೃತ್ಯ

Update: 2018-05-30 19:08 GMT

ಕಾಬೂಲ್, ಮೇ 30: ತಾಲಿಬಾನ್ ಆತ್ಮಹತ್ಯಾ ದಾಳಿಕೋರರ ತಂಡವೊಂದು ಪೊಲೀಸ್ ಠಾಣೆಯ ಬಳಿ ಸ್ಫೋಟ ನಡೆಸಿದ ಪರಿಣಾಮ ಕನಿಷ್ಟ ಮೂವರು ಪೊಲೀಸರು ಸಾವನ್ನಪ್ಪಿದ ಘಟನೆ ಅಫ್ಘಾನಿಸ್ತಾನದ ಪೂರ್ವ ಲೊಗರ್ ಪ್ರಾಂತ್ಯದಲ್ಲಿ ಬುಧವಾರ ಸಂಭವಿಸಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮಡಿದವರ ಪೈಕಿ ಪೊಲೀಸ್ ಠಾಣೆಯ ಕಮಾಂಡರ್, ಇನ್ನೋರ್ವ ಅಧಿಕಾರಿ ಹಾಗೂ ಲೊಗರ್ ರಾಜಧಾನಿ ಪುಲಿ ಅಲಿಮ್‌ನ ಸಂಚಾರ ಪೊಲೀಸ್ ಸಹಾಯಕ ನಿರ್ದೇಶಕರು ಸೇರಿದ್ದಾರೆ ಎಂದು ಪ್ರಾಂತೀಯ ಗವರ್ನರ್‌ನ ವಕ್ತಾರ ಖಾಲಿದ್ ಸಫಿ ತಿಳಿಸಿದ್ದಾರೆ. ಘಟನೆಯಲ್ಲಿ ನಾಲ್ಕು ಪೊಲೀಸರು ಸೇರಿದಂತೆ ಹನ್ನೆರಡು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ನಾಗರಿಕರ ಪೈಕಿ ಇಬ್ಬರು ಮಕ್ಕಳೂ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬುಧವಾರ ಬೆಳಿಗ್ಗೆ ಆತ್ಮಹತ್ಯಾ ದಾಳಿಕೋರ ಸ್ಫೋಟಕ ತುಂಬಿದ್ದ ಕಾರನ್ನು ಪೊಲೀಸ್ ಠಾಣಾ ಕಟ್ಟಡದ ಸಮೀಪ ಸ್ಫೋಟಿಸಿದ್ದ. ಇದಾದ ನಂತರ ಮೂವರು ಆತ್ಮಹತ್ಯಾ ಬಾಂಬರ್‌ಗಳು ಠಾಣೆಯ ಆವರಣದ ಒಳಗೆ ಪ್ರವೇಶಿಸಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಉಗ್ರರ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಮೂವರನ್ನೂ ಹತ್ಯೆ ಮಾಡಲಾಯಿತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News