ಯಶವಂತಪುರ ರೈಲು ನಿಲ್ದಾಣದಲ್ಲಿ ಬ್ಯಾಟರಿ ಚಾಲಿತ ಗಾಡಿಗಳ ಸೇವೆ

Update: 2018-06-06 15:03 GMT

ಬೆಂಗಳೂರು, ಜೂ.6: ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗಾಗಿ ವಿಶೇಷ ಬ್ಯಾಟರಿ ಚಾಲಿತ ಗಾಡಿಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ರೈಲ್ವೆ ಅಧಿಕಾರಿ ಆರ್.ಎಸ್.ಸಕ್ಸೇನಾ ತಿಳಿಸಿದ್ದಾರೆ.

ಪರಿಸರ ದಿನಾಚರಣೆ ಭಾಗವಾಗಿ ಕ್ರಾಂತಿವೀರ ಸಂಗೊಳ್ಳಿ ರೈಲು ನಿಲ್ದಾಣದ ಒಂದು ಪ್ಲಾಟ್ ಫಾರಂನಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಪುಡಿ ಮಾಡುವ ಯಂತ್ರವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಸಕ್ಸೇನಾ, ಕಳೆದ ತಿಂಗಳಿನಿಂದ ಬೆಂಗಳೂರು ವಿಭಾಗದಲ್ಲಿ ಇಂತಹ ನಾಲ್ಕು ಯಂತ್ರಗಳು ಕಾರ್ಯಾಚರಿಸುತ್ತಿವೆ ಎಂದು ಹೇಳಿದರು.

8105777772 ಸಂಖ್ಯೆಗೆ ಕರೆ ಮಾಡುವ ಮೂಲಕ ದಿನ ಪೂರ್ತಿ ಈ ಸೇವೆಯನ್ನು ಎಲ್ಲರೂ ಪಡೆಯಬಹುದಾಗಿದ್ದು, ಬೆಂಗಳೂರು ಸಿಟಿ ರೈಲು ನಿಲ್ದಾಣದಲ್ಲಿ ಏಳು ಗಾಡಿಗಳು ಕಾರ್ಯಾಚರಿಸುತ್ತಿದೆ. ಈ ಸೇವೆಗಾಗಿ ಸಾರ್ವಜನಿಕರು ರೈಡ್ ಒಂದಕ್ಕೆ 20 ರೂ. ನೀಡಬೇಕಾಗುತ್ತದೆ. ಈ ಗಾಡಿಯೊಂದಕ್ಕೆ ಒಟ್ಟು ವೆಚ್ಚ 4.5 ಲಕ್ಷ ರೂ. ತಗುಲಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News