ಕೇಂದ್ರ ಸರಕಾರದೊಂದಿಗೆ ಮಾತುಕತೆ ಬೇಡ: ಪ್ರತ್ಯೇಕತಾವಾದಿಗಳಿಗೆ ಫಾರೂಕ್ ಉಪದೇಶ

Update: 2018-06-10 14:33 GMT

ಶ್ರೀನಗರ,ಜೂ.10: ಕೇಂದ್ರ ಸರಕಾರದೊಂದಿಗೆ ಮಾತುಕತೆಗಳಲ್ಲಿ ತೊಡಗಿಕೊಳ್ಳಬೇಡಿ,ಅದರಿಂದ ಏನೂ ಲಾಭವಿಲ್ಲ ಎಂದು ಲೋಕಸಭಾ ಸದಸ್ಯ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಪ್ರತ್ಯೇಕತಾವಾದಿಗಳಿಗೆ ಸಲಹೆ ನೀಡಿದ್ದಾರೆ.

“ಸಂವಿಧಾನವು ಖಾತರಿ ಪಡಿಸಿರುವ ಸ್ವಾಯತ್ತತೆಯನ್ನು ಅವರು(ಬಿಜೆಪಿ) ನಮಗೆ ನೀಡಲಿಲ್ಲ,ನಿಮಗೇನು ನೀಡುತ್ತಾರೆ” ಎಂದು ಫಾರೂಕ್ ರಾಜ್ಯದ ಪ್ರಮುಖ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರತ್ಯೇಕತಾವಾದಿಗಳನ್ನು ಪ್ರಶ್ನಿಸಿದ್ದಾರೆ.

“ಮಾತುಕತೆ ತೋರಿಕೆಗೆ ನಡೆಸುತ್ತಿರುವ ಕಸರತ್ತಾಗಿದೆ. ಕಾಶ್ಮೀರದಲ್ಲಿ ಸಹಜ ಸ್ಥಿತಿಯನ್ನು ಮರಳಿಸುವಂತೆ ಭಾರತದ ಮೇಲೆ ಜಾಗತಿಕ ಒತ್ತಡವಿದೆ.ಇದೊಂದು ಕುತಂತ್ರ,ನೀವು ಅದಕ್ಕೆ ಬಲಿಯಾಗಬೇಡಿ. ಭಾರತ ಸರಕಾರವು ದೃಢವಾದ ಪ್ರಸ್ತಾವದೊಂದಿಗೆ ಮುಂದೆ ಬಂದರೆ ಮಾತ್ರ ಮಾತುಕತೆಗೆ ಮುಂದಾಗಿ” ಎಂದು ನ್ಯಾಷನಲ್ ಕಾನ್‌ಫರೆನ್ಸ್‌ನ ಅಧ್ಯಕ್ಷರೂ ಆಗಿರುವ ಅವರು ಪ್ರತ್ಯೇಕತಾವಾದಿಗಳಿಗೆ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ. ಕೆಲವು ಪ್ರಮುಖ ಪ್ರತ್ಯೇಕತಾವಾದಿಗಳು ಶ್ರೀನಗರದಲ್ಲಿ ಜೈಲುಗಳಲ್ಲಿದ್ದಾರೆ ಅಥವಾ ಗೃಹಬಂಧನದಲ್ಲಿದ್ದಾರೆ. ಕೇಂದ್ರದೊಂದಿಗೆ ಮಾತುಕತೆಗಳಲ್ಲಿ ತೊಡಗಿಕೊಳ್ಳುವ ಬಗ್ಗೆ ಪ್ರತ್ಯೇಕತಾವಾದಿಗಳು ಈವರೆಗೆ ಯಾವುದೇ ಧನಾತ್ಮಕ ಸಂಕೇತವನ್ನು ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News