ಈದುಲ್ ಫಿತ್ರ್: ಜೆರುಸಲೇಂನ ಅಲ್-ಅಕ್ಸಾ ಮಸೀದಿಯಲ್ಲಿ ಪ್ರಾರ್ಥಿಸಿದ ಜನಸಾಗರ

Update: 2018-06-17 07:06 GMT

ಗಾಝಾ ಸಿಟಿ, ಜೂ. 16: ಈದುಲ್ ಫಿತ್ರ್  ಸಂದರ್ಭದಲ್ಲಿ ಶುಕ್ರವಾರ ಜೆರುಸಲೇಂನಲ್ಲಿರುವ ಅಲ್-ಅಕ್ಸಾ ಮಸೀದಿಯಲ್ಲಿ 90,000ಕ್ಕೂ ಅಧಿಕ ಫೆಲೆಸ್ತೀನ್ ಮುಸ್ಲಿಮರು ಬೆಳಗ್ಗಿನ ಪ್ರಾರ್ಥನೆ ಸಲ್ಲಿಸಿದರು.

ಅದೇ ವೇಳೆ, ಇಸ್ರೇನ್‌ನೊಂದಿಗಿನ ಗಡಿಬೇಲಿ ಸಮೀಪದ ಮರಳ ರಾಶಿಯ ಮೇಲೆ ಹಾಸಲಾದ ಬಟ್ಟೆಯಲ್ಲಿ ಮಂಡಿಯೂರಿ ಹಲವು ಸಾವಿರ ಗಾಝಾ ಮುಸ್ಲಿಮರು ಪ್ರಾರ್ಥಿಸಿದರು.

ಜೆರುಸಲೇಂ ಮತ್ತು ಗಾಝಾ ಪಟ್ಟಿಯಲ್ಲಿ ನೆಲೆಸಿರುವ ಸಂಘರ್ಷದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಬ್ಬಾಚರಣೆಗೆ ಸಂಚಕಾರ ಬಂದಿದೆ.

ಮಾರ್ಚ್ ಕೊನೆಯಿಂದ ಇಸ್ರೇಲ್-ಗಾಝಾ ಪಟ್ಟಿಯ ಗಡಿಯಲ್ಲಿ ಪ್ರತಿ ಶುಕ್ರವಾರ ನಡೆಯುತ್ತಾ ಬಂದಿರುವ ಇಸ್ರೇಲಿ ಪ್ರತಿಭಟನೆಗಳಲ್ಲಿ ಈವರೆಗೆ 120ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇಸ್ರೇಲ್ ದೇಶ ರಚನೆಗಾಗಿ ನಡೆದ ಯುದ್ಧದ ವೇಳೆ, ಇಸ್ರೇಲ್‌ನಿಂದ ತಮ್ಮ ಕುಟುಂಬದ ಆಸ್ತಿಪಾಸ್ತಿಗಳನ್ನು ತೊರೆದು ಬಂದ ಫೆಲೆಸ್ತೀನಿಯರಿಗೆ ತಮ್ಮ ತಾಯ್ನಾಡಿಗೆ ಮರಳಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಫೆಲೆಸ್ತೀನಿಯರು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News