ಗ್ರೀನ್ ಕಾರ್ಡ್ ಪಡೆಯಲು ಭಾರತೀಯರಿಗೆ ಬೇಕು 150 ವರ್ಷ

Update: 2018-06-16 18:42 GMT

ವಾಶಿಂಗ್ಟನ್, ಜೂ. 16: ಉನ್ನತ ಶಿಕ್ಷಣ ಪಡೆದ ಭಾರತೀಯರು ಅಮೆರಿಕದ ಗ್ರೀನ್ ಕಾರ್ಡ್ ಪಡೆಯಲು 150 ವರ್ಷಕ್ಕೂ ಅಧಿಕ ಸಮಯ ಕಾಯಬೇಕಾಗಬಹುದು ಎಂದು ವಾಶಿಂಗ್ಟನ್‌ನಲ್ಲಿರುವ ಸಂಸ್ಥೆ ‘ಕ್ಯಾಟೊ ಇನ್‌ಸ್ಟಿಟ್ಯೂಟ್’ ಅಂದಾಜಿಸಿದೆ.

ವಿದೇಶಿಯರು ಅಮೆರಿಕದಲ್ಲಿ ಖಾಯಂ ಆಗಿ ವಾಸಿಸಲು ಮತ್ತು ಕೆಲಸ ಮಾಡಲು ಗ್ರೀನ್ ಕಾರ್ಡ್ ಅವಕಾಶ ನೀಡುತ್ತದೆ.

ಗ್ರೀನ್ ಕಾರ್ಡ್ ಪಡೆಯುವುದಕ್ಕಾಗಿ ಬಂದಿರುವ ಅರ್ಜಿಗಳ ವಿವರಗಳನ್ನು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ (ಯುಎಸ್‌ಸಿಐಎಸ್) ಇತ್ತೀಚೆಗೆ ಬಹಿರಂಗಪಡಿಸಿದ ಬಳಿಕ ಕ್ಯಾಟೊ ಇನ್‌ಸ್ಟಿಟ್ಯೂಟ್ ಈ ಲೆಕ್ಕಾಚಾರಗಳನ್ನು ಮಾಡಿದೆ.

2018 ಎಪ್ರಿಲ್ 20ರ ವೇಳೆಗೆ, 6,32,219 ಭಾರತೀಯ ವಲಸಿಗರು, ಅವರ ಸಂಗಾತಿಗಳು ಮತ್ತು ಅಪ್ರಾಪ್ತ ಮಕ್ಕಳು ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿದ್ದಾರೆ.

‘ಅಸಾಧಾರಣ ಸಾಮರ್ಥ್ಯ’ ಹೊಂದಿರುವ ಇಬಿ-1 ವಲಸಿಗರ ಕಾಯುವಿಕೆ ಅವಧಿ ಅತ್ಯಂತ ಕಡಿಮೆಯಾಗಿರುತ್ತದೆ.

ಭಾರತದಿಂದ ಬಂದಿರುವ ‘ಅಸಾಧಾರಣ ಸಾಮರ್ಥ್ಯ’ದ ವಲಸಿಗರು ‘ಕೇವಲ’ 6 ವರ್ಷ ಕಾಯಬೇಕಾಗುತ್ತದೆ ಎಂದು ಕ್ಯಾಟೊ ಇನ್‌ಸ್ಟಿಟ್ಯೂಟ್ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.

ಇಬಿ-1 ವಿಭಾಗದಲ್ಲಿ 34,824 ಭಾರತೀಯ ಅರ್ಜಿದಾರರಿದ್ದಾರೆ. ಅವರ ಸಂಗಾತಿಗಳು ಮತ್ತು ಮಕ್ಕಳನ್ನೊಳಗೊಂಡ 48,754 ಭಾರತೀಯರು ಸೇರಿದಂತೆ ಒಟ್ಟು 83,578 ಭಾರತೀಯರು ಇಬಿ-1 ವಿಭಾಗದಲ್ಲಿ ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News