ಮೆಟ್ರೋ ರೈಲು ಸಂಚಾರಕ್ಕೆ ವರ್ಷದ ಹರ್ಷ

Update: 2018-06-17 18:46 GMT

ಬೆಂಗಳೂರು, ಜೂ.17: ರಾಜಧಾನಿ ಬೆಂಗಳೂರಿಗೆ ಮೆಟ್ರೋ ಸಂಪರ್ಕ ದೊರೆತು ಒಂದು ವರ್ಷ ಪೂರೈಸುತ್ತಿದೆ. ಈ ಸಂಭ್ರಮಕ್ಕೆ ಬಿಎಂಆರ್‌ಸಿಎಲ್ ಮೊತ್ತೊಂದು ಸಿಹಿ ಸುದ್ದಿ ನೀಡಲು ಸಜ್ಜಾಗಿದ್ದು, ಜೂ.18(ಸೋಮವಾರ) ನಮ್ಮ ಮೆಟ್ರೋದ ಮೊದಲ 6 ಬೋಗಿ ರೈಲಿಗೆ ರೈಲ್ವೆ ಸುರಕ್ಷತಾ ಆಯುಕ್ತರು ಒಪ್ಪಿಗೆ ನೀಡುವ ಸಾಧ್ಯತೆ ಇದೆ.

ನಮ್ಮ ಮೆಟ್ರೋದಲ್ಲಿ ಪ್ರತಿ ಕಿಮೀಗೆ 10ಸಾವಿರ ಜನ ಪ್ರಯಾಣಿಸುತ್ತಿದ್ದಾರೆ. 2017ರ ಸೆ.28ರಂದು 4.10ಲಕ್ಷ ಜನ ನಮ್ಮ ಮೆಟ್ರೋ ಬಳಸಿರುವುದು, ಇಲ್ಲಿಯವರೆಗಿನ ದಾಖಲೆಯಾಗಿದೆ. ಪ್ರತಿ ಕಿಮೀಗೆ ಪ್ರಯಾಣಿಕರ ಸಂಖ್ಯೆ 10ಸಾವಿರ ದಾಟಿದರೆ, ಅಂತಹ ಮೆಟ್ರೋವನ್ನು ಅತಿ ದಟ್ಟಣೆಯ ಮೆಟ್ರೋ ಎಂದು ಪರಿಗಣಿಸಲಾಗುತ್ತದೆ.

6ಬೋಗಿ ಮೆಟ್ರೋ ರೈಲು ಸಂಚಾರದಿಂದ ಪ್ರಯಾಣಿಕರ ಸಂಖ್ಯೆ ಕ್ರಮೇಣ 5ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. 2017 ಮಾರ್ಚ್ ಅಂತ್ಯಕ್ಕೆ ವಾರ್ಷಿಕ ಟಿಕೆಟ್ ಆದಾಯ 130 ಕೋಟಿ ರೂ.ಇತ್ತು. ಎಪ್ರಿಲ್ 2017ರಿಂದ 2018 ಮಾರ್ಚ್ 31ರವರೆಗೆ ಟಿಕೆಟ್ ಆದಾಯ 324.95 ಕೋಟಿ ರೂ. ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News